ಅಭಿಪ್ರಾಯ / ಸಲಹೆಗಳು

ಹಿಂದುಳಿದ ತಾಲ್ಲೂಕುಗಳ 100 FPOಗಳು ಪಡೆದ ಸಾಲಕ್ಕೆ ಶೇ. 4 ಬಡ್ಡಿ ಸಹಾಯಧನ

 

  ಪರಿಚಯ


ರೈತ ಉತ್ಪಾದಕರ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲ್ಲೂಕುಗಳ 100 ರೈತ ಉತ್ಪಾದಕರ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ತಲಾ ರೂ.20.00 ಲಕ್ಷ ವರೆಗಿನ ಸಾಲಕ್ಕೆ ಶೇ.೪%ರ ಬಡ್ಡಿ ಸಹಾಯಧನ ನೀಡಲು

ರೈತರು ಅದರಲ್ಲಿ ಪ್ರಮುಖವಾಗಿ ಸಣ್ಣ ಹಾಗೂ ಅತಿ ಸಣ್ಣ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವಲ್ಲಿ ಒಬ್ಬಂಟಿಯಾಗಿ ಎದುರಿಸುವ ಹಲವಾರು ಸವಾಲುಗಳನ್ನು ಪರಿಹರಿಸಲು, ಸ್ಥಳೀಯ ರೈತ ಸಮುದಾಯದ ಸಂಧಾನ ಸಾಮರ್ಥ್ಯವನ್ನು ಹಾಗೂ ವ್ಯವಹಾರಿಕ ಪಾಲುದಾರಿಕೆಯನ್ನು ಅಭಿವೃದ್ಧಿಗೊಳಿಸುವ ಮೂಲಕ ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿರುತ್ತದೆ. ಈ ಸಂಸ್ಥೆಗಳನ್ನು ಉತ್ಪಾದಕರ ಬೇಡಿಕೆಗೆ ಅನುಗುಣವಾಗಿ ಹಾಗೂ ಮೌಲ್ಯ ಸರಪಳಿಯ ಪದ್ಧತಿಯನ್ನು ಅಳವಡಿಸುವ ಮೂಲಕ ರೈತರ ಉತ್ಪನ್ನಗಳನ್ನು ಕ್ರೋಡಿಕರಿಸಿ, ಮೌಲ್ಯವರ್ಧಿಸಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸಂಸ್ಕರಿಸಿದ ಉತ್ಪನ್ನಗಳನ್ನು ಮಾರುಕಟ್ಟೆ ದರಕಿಂತ ಕಡಿಮೆ ದರದಲ್ಲಿ ಒದಗಿಸುವ ಮೂಲಕ ರೈತ ಉತ್ಪಾದಕರ ಸಂಸ್ಥೆಗಳ ಆದಾಯ ವೃದ್ಧಿಸಲು ಸಹಕಾರಿಯಾಗಲು ರೂಪಿಸಲಾಗಿದೆ.

 


 

 1. ಹಿಂದುಳಿದ ತಾಲ್ಲೂಕಿಗಳಲ್ಲಿ ರಚನೆಗೊಂಡಿರುವ 100 ರೈತ ಉತ್ಪಾದಕರ ಸಂಸ್ಥೆಗಳು ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಪಡೆದ ತಲಾ ರೂ.20.00ಲಕ್ಷ ವರೆಗಿನ ಸಾಲಕ್ಕೆ ಶೇ.4%ರಷ್ಟು ಬಡ್ಡಿ ಸಹಾಯಧನ ಸರ್ಕಾರದಿಂದ ನೀಡುವುದರಿಂದ, ಸದರಿ ರೈತ ಉತ್ಪಾದಕರ ಸಂಸ್ಥೆಗಳ ವ್ಯವಹಾರಿಕ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಹಿಂದುಳಿದ ತಾಲ್ಲೂಕುಗಳ ರೈತ ಉತ್ಪಾದಕರ ಸಂಸ್ಥೆಗಳ ಸಮಗ್ರ ಸುಧಾರಣೆ ಕೈಗೊಳ್ಳಲು.
 2. ರೈತ ಉತ್ಪಾದಕರ ಸಂಸ್ಥೆಗಳ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಕಿಸುವ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲು.
 3. ರೈತ ಉತ್ಪಾದಕರ ಸಂಸ್ಥೆಗಳು ಕೊಯ್ಲೋತ್ತರ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ/ಮೌಲ್ಯವರ್ಧನೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ವಿವಿಧ ತಂತ್ರಜ್ಞಾನಗಳ ಪ್ರೋತ್ಸಾಹ ಮತ್ತು ಅಳವಡಿಕೆಯಿಂದ, ಕೊಯ್ಲೋತ್ತರ ನಷ್ಟಗಳನ್ನು ಕಡಿಮೆಗೊಳಿಸುವ ಮೂಲಕ ರೈತ ಉತ್ಪಾದಕರ ಸಂಸ್ಥೆಗಳ ಆದಾಯವನ್ನು ವೃದ್ಧಿಗೊಳಿಸಲು ಸಹಕಾರಿಯಾಗಲು.
 4. ರೈತ ಉತ್ಪಾದಕರ ಸಂಸ್ಥೆಗಳ ಮೌಲ್ಯ ಸರಪಳಿಯ ಅಭಿವೃದ್ಧಿಯನ್ನು ಪ್ರೇರೇಪಿಸುವುದು ಹಾಗೂ ಕೃಷಿ ಕ್ಷೇತ್ರವನ್ನು ವ್ಯವಹಾರಿಕ ಉದ್ದಿಮೆಯಾಗಿ ಪ್ರೋತ್ಸಾಹಿಸಲು.
 5. ರೈತ ಉತ್ಪಾದಕರ ಸಂಸ್ಥೆಗಳಿಗೆ ಫಾರ್ವರ್ಡ್‌(ಕೃಷಿ ಉತ್ಪಾದನೆಯ ಮುನ್ನ) ಹಾಗೂ ಬ್ಯಾಕ್ವರ್ಡ್(ಕೃಷಿ ಉತ್ಪಾದನೆಯ ನಂತರ)ಸರಪಳಿಗಳನ್ನು ಸೃಜಿಸುವುದರ ಮೂಲಕ, ರೈತ ಉತ್ಪಾದಕರ ಸಂಸ್ಥೆಗಳ ಆದಾಯ ದ್ವಿಗುಣಗೊಳ್ಳಿಸಲು ಸಹಕಾರಿಯಾಗಲು.
 6. ಕೃಷಿ/ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ರೇಷ್ಮೆ ಮತ್ತು ಕೈಮಗ್ಗ & ಜವಳಿ ಉತ್ಪನ್ನಗಳ ಸಂಸ್ಕರಣೆ/ ಮೌಲ್ಯವರ್ಧಿತ ಸಂಸ್ಕರಣೆ ಘಟಕಗಳಿಗೆ ಹೆಚ್ಚಿನ ಒತ್ತು ನೀಡಲು ಸಹಕಾರಿಯಾಗಲು, ರೈತ ಉತ್ಪಾದಕರ ಸಂಸ್ಥೆಗಳು ಪಡೆಯುವ ಸಾಲಕ್ಕೆ ಬಡ್ಡಿ ಸಹಾಯಧನ ಒದಗಿಸಲು. 

 1. ರಾಜ್ಯದಲ್ಲಿ ಹಿಂದುಳಿದ ತಾಲ್ಲೂಕಿನಲ್ಲಿ ರಚನೆಗೊಂಡು, ಕಂಪನಿ ಕಾಯ್ದೆ 2013 ಅಡಿಯಲ್ಲಿ ನೋಂದಾಯಿಸಿ, ಕನಿಷ್ಠ ೬೦೦ ರೈತ/ಷೇರುದಾರರನ್ನು ಹೊಂದಿ, Input & Output ವ್ಯವಹಾರದಲ್ಲಿ ಸಕ್ರಿಯಾಗಿ ವ್ಯವಹರಿಸಿ 2022-23ನೇ ಸಾಲಿನಲ್ಲಿ ವಾರ್ಷಿಕ ಕನಿಷ್ಠ (ಎರಡು ವ್ಯವಹಾರಗಳು ಕೂಡಿದಂತೆ) ಒಟ್ಟು ರೂ.20.00 ಲಕ್ಷಗಳ ವರೆಗೆ ವ್ಯವಹಾರವನ್ನು ಮಾಡುತಿರುವಂತಹ 100 ರೈತ ಉತ್ಪಾದಕರ ಸಂಸ್ಥೆಗಳು ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ಮೂಲಕ ಪ್ರಸಕ್ತ ಸಾಲಿನಲ್ಲಿ ಪಡೆದ ಗರಿಷ್ಠ ರೂ.20.00 ಲಕ್ಷಗಳ ವರೆಗಿನ ಸಾಲಕ್ಕೆ (ಮಂಜೂರಾದ ಸಾಲಕ್ಕೆ) ಶೇ.೪% ರಷ್ಟು ಬಡ್ಡಿ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
 2. ದಿನಾಂಕ:01.04.2023ರಿಂದ ಯೋಜನೆ (Project)ಘಟಕದ ಮಂಜೂರಾತಿ ಪಡೆದು ಸಹಕಾರಿ ಅಥವಾ ವಾಣಿಜ್ಯ ಬ್ಯಾಂಕುಗಳಿಂದ ಪಡೆದಂತಹ ಹಿಂದುಳಿದ ತಾಲ್ಲೂಕಿನ 100 ರೈತ ಉತ್ಪಾದಕರ ಸಂಸ್ಥೆಗಳು ಮಾತ್ರ ರಾಜ್ಯ ಸರ್ಕಾರದಿಂದ ಶೇ.೪% ರಷ್ಟು ಬಡ್ಡಿ ಸಹಾಯಧನ ಸವಲತ್ತು ಪಡೆಯಲು ಅರ್ಹತೆಯನ್ನು ಪಡೆಯುತ್ತಾರೆ.
 3. ಪ್ರತಿ ತ್ರೈಮಾಸಿಕ/ಅರ್ಧವಾರ್ಷಿಕ ಅವಧಿಯೊಳಗೆ ಸಾಲ ಮರುಪಾವತಿ ಮಾಡಿದ ರೈತ ಉತ್ಪಾದಕರ ಸಂಸ್ಥೆಗಳು ಮಾತ್ರ ರಾಜ್ಯ ಸರ್ಕಾರದಿಂದ ನೀಡಲಾಗುವ ಶೇ.4%ರ ಬಡ್ಡಿ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ನಿಗಧಿತ ತ್ರೈಮಾಸಿಕ/ಅರ್ಧವಾರ್ಷಿಕ ಅವಧಿಯೊಳಗೆ ಬಡ್ಡಿ ಪಾವತಿಸದೆ ಉಳಿಸಿಕೊಂಡು ದಂಡದ ಮೊತ್ತಕ್ಕೆ (Penalty Amount) ಸಂಬಂದಿಸಿದಂತೆ, ಬಡ್ಡಿ ಸಹಾಯಧನ ಪಡೆಯಲು ಅವಕಾಶವಿರುವುದಿಲ್ಲ.
 4. ಹಿಂದುಳಿದ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಈ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಂಡು ನಿಗಧಿ ನಮೂನೆಯಲ್ಲಿ (ಅನುಬಂಧ-೧ರಂತೆ) ರೈತ ಉತ್ಪಾದಕರ ಸಂಸ್ಥೆಗಳು ಅರ್ಜಿಯನ್ನು ಸಲ್ಲಿಸಲು ಕ್ರಮವಹಿಸುವುದು.
 5. 2023-24ನೇ ಸಾಲಿನಲ್ಲಿ ಸಾಲ ಪಡೆದು ಅರ್ಜಿಗಳನ್ನು ಸಲ್ಲಿಸಿದ ರೈತ ಉತ್ಪಾದಕರ ಸಂಸ್ಥೆಗಳು ಪ್ರಸಕ್ತ ಸಾಲಿಗೆ ಮಾತ್ರ ಶೇ.೪%ರ ಬಡ್ಡಿ ಸಹಾಯಧನ ಪಡೆಯಲು ಅರ್ಹರಿರುತ್ತಾರೆ. ಮುಂದಿನ ಸಾಲಿಗೆ ಸರ್ಕಾರದಿಂದ ಯೋಜನೆ ಮುಂದುವರಿಕೆ ಆಧಾರದ ಮೇಲೆ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗುವುದು. 

 1. ರೈತ ಉತ್ಪಾದಕರ ಸಂಸ್ಥೆಗಳು ನಿಗಧಿಪಡಿಸಿರುವ ಅನುಬಂಧ-೧ರಲ್ಲಿ ಭರ್ತಿಮಾಡಿ ಈ ಕೆಳಗೆ ನಮೂಧಿಸಿರುವ ಅವಶ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಜಿಲ್ಲೆಗಳು ನಿಗಧಿಪಡಿಸಿದ ದಿನಾಂಕದೊಳಗೆ ಸಂಬಂಧಿಸಿದ ಜಂಟಿ ಕೃಷಿ ನಿರ್ದೇಶಕರು ರವರ ಕಛೇರಿಯಲ್ಲಿ ಸಲ್ಲಿಸುವುದು.
 2. ಒಂದು ವೇಳೆ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾದಲ್ಲಿ, ಅರ್ಜಿಗಳನ್ನು ಜೇಷ್ಠತಾ ಪಟ್ಟಿಯನ್ನು ನಿರ್ವಹಿಸಿ ಅರ್ಜಿಗಳನ್ನು ಪರಿಗಣಿಸುವುದು, ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆಯ ಮಾನದಂಡ ಅನುಸರಿಸುವುದು. ಈ ಕುರಿತು ರೈತ ಉತ್ಪಾದಕರ ಸಂಸ್ಥೆಗಳಿಗೆ ಮಾಹಿತಿ ಒದಗಿಸಲು ಕ್ರಮಕೈಗೊಳ್ಳುವುದು.
 3. ದಾಖಲಾತಿಗಳ ಚೆಕ್‌ ಲಿಸ್ಟ್:

  1. ಅನುಬಂಧ-೧ ರಲ್ಲಿ ಭರ್ತಿ ಮಾಡಿದ ಅರ್ಜಿ ನಮೂನೆ.
  2. ರೈತ ಉತ್ಪಾದಕರ ಸಂಸ್ಥೆಯ ನೋಂದಣಿ ಪ್ರಮಾಣ ಪತ್ರದ ಪ್ರತಿ.
  3. ವ್ಯಾಪಾರ ವ್ಯವಹಾರ ಅಭಿವೃದ್ದಿಗಾಗಿ ಬ್ಯಾಂಕ್‌ ಮೂಲಕ ಪಡೆದ ಸಾಲದ ಚಟುವಟಿಕೆಗಳ ವಿಸೃತ ಯೋಜನಾ ವರದಿಯ ಪ್ರತಿ.
  4. ಬ್ಯಾಂಕ್‌ ನಿಂದ ನೀಡಲಾಗಿರುವ ಸಾಲ ಮಂಜೂರಾತಿ ಪ್ರಮಾಣ ಪತ್ರದ ದೃಡಿಕೃತ ಪ್ರತಿ.
  5. FPOದ GST, PAN, TAN ಸಂಖ್ಯೆಗಳ ಪ್ರತಿಗಳು.
  6. ಸಂಬಂಧಿಸಿದ ಕೃಷಿ ಪರಿಕರ ವ್ಯವಹಾರ ಮತ್ತು ಕೃಷಿ ಉತ್ಪನ್ನ ಮಾರಾಟ/ಸಂಸ್ಕರಣೆ ವ್ಯಾಪಾರ ವ್ಯವಹಾರದ ದಾಖಲಾತಿಗಳ ಸ್ವಯಂ ದೃಡಿಕೃತ ಪ್ರತಿ
  7. ಸಾಲ ಮಂಜೂರಾತಿಗಾಗಿ ಬ್ಯಾಂಕಿಗೆ ಸಲ್ಲಿಸಿದ ಯೋಜನಾ ವಿಸೃತ ವರದಿಯ ದೃಡಿಕೃತ ಪ್ರತಿ.
  8. ಮೇಲೆ ನಮೂದಿಸಿದ ಕ್ರಸಂ (a) ರಿಂದ (g) ವರೆಗಿನ ದಾಖಲಾತಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅಪೂರ್ಣ ಅರ್ಜಿ ನಮೂನೆ ಮತ್ತು ದಾಖಲಾತಿಗಳನ್ನು ಸಲ್ಲಿಸಿದಲ್ಲಿ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಇತ್ತೀಚಿನ ನವೀಕರಣ​ : 05-12-2023 10:27 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080