ಅಭಿಪ್ರಾಯ / ಸಲಹೆಗಳು

ಎನ್ಎಂಎಸ್ಎ - ಆರ್ ಎ ಡಿ

ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ - ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಕಾರ್ಯಕ್ರಮ

ಸಂಕ್ಷಿಪ್ತ ಮಾಹಿತಿ/ಕಿರು ಪರಿಚಯ 

ಕೇಂದ್ರ ಸರ್ಕಾರವು 2014-15ನೇ ಸಾಲಿನ ಆರ್ಥಿಕ ವರ್ಷದಿಂದ “ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ" (NMSA) ಕಾರ್ಯಕ್ರಮವನ್ನು ವಿಶೇಷವಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಜಾರಿಗೆ ತಂದಿದೆ. ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಅಡಿಯಲ್ಲಿ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಕಾರ್ಯಕ್ರಮವನ್ನು (NMSA-RAD) ರೂಪಿಸಲಾಗಿದ್ದು, ಕಾರ್ಯಕ್ರಮದಡಿ ರೈತರಿಗೆ ಸಮಗ್ರ ಕೃಷಿ ಪದ್ದತಿಗಳ ಅಳವಡಿಕೆಯನ್ನು ಪ್ರೋತ್ಸಾಹಿಸುವುದು, ಅದರಲ್ಲೂ ಬಹು ಬೆಳೆ ಪದ್ದತಿ, ಮಿಶ್ರ ಬೆಳೆ, ಅಂತರ ಬೆಳೆ, ಬೆಳೆ ಪರಿವರ್ತನೆ, ತೋಟಗಾರಿಕೆ, ಕೃಷಿ ಅರಣ್ಯ, ಪಶು ಸಂಗೋಪನೆ, ಮೀನುಗಾರಿಕೆ, ಜೇನು ಸಾಕಣೆ ಘಟಕಗಳನ್ನೊಳಗೊಂಡ ಸಮಗ್ರ ಕೃಷಿ ಪದ್ದತಿಗಳ ಅಳವಡಿಕೆಯನ್ನು ಪ್ರೋತ್ಸಾಹಿಸಿ ಆ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದಲ್ಲದೆ, ಬರ, ನೆರ ಅಥವ ಇತರೆ ಸಂಕಷ್ಟ ಪರಿಸ್ಥಿತಿಗಳನ್ನು ಎದುರಿಸಲು ಸಹಕಾರಿಯಾಗುತ್ತದೆ.

ಈ ಯೋಜನೆಯನ್ನು ರಾಜ್ಯದಲ್ಲಿ 2014-15ನೇ ಸಾಲಿನಿಂದ ಜಲಾನಯನ ಅಭಿವೃದ್ದಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, 2018-19ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ರೂ. 16.68 ಕೋಟಿ ಕಾರ್ಯಕ್ರಮ ಅನುಮೋದನೆಯಾಗಿರುತ್ತದೆ (60:40 ಅನುಪಾತ). ಮೊದಲನೇ ಕಂತಿನಲ್ಲಿ ಕೇಂದ್ರ ಸರ್ಕಾರದಿಂದ ರೂ. 5.54 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪೂರಕವಾಗಿ ರಾಜ್ಯ ಸರ್ಕಾರದಿಂದ ರೂ.3.69 ಕೋಟಿ ಸೇರಿ ಒಟ್ಟು 9.23 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ, ಅನುಮೋದಿತ ಕಾರ್ಯಕ್ರಮದಂತೆ, ಬಳ್ಳಾರಿ, ಕೊಪಳ, ರಾಯಚೂರು, ಕಲಬುರಗಿ, ಬೆಂಗಳೂರು, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಚಿಕ್ಕಬಳಾಪುರ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಗದಗ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಮತ್ತು ತುಮಕೂರು ಸೇರಿ ಒಟ್ಟು 18 ಜಿಲ್ಲೆಗಳಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಕಾರ್ಯಕ್ರಮ ಪ್ರಗತಿಯಲ್ಲಿದೆ.

ಯೋಜನೆಯ ಉದ್ದೇಶ ಹಾಗೂ ಅನುಷ್ಠಾನಗೊಳಿಸುವ ಘಟಕದ ವಿವರಗಳು: 

ಈ ಯೋಜನೆಯ ಮೂಲಕ ಆಹಾರ ಮತ್ತು ಜೀವನೋಪಾಯ ಭದ್ರತೆ ಹೆಚ್ಚಿಸುವ, ಕೃಷಿ ಆದಾಯ ಹೆಚ್ಚಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ರೈತರು ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು, ರೈತ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ಮಳೆಯಾಶ್ರಿತ ಕೃಷಿ ಅಭಿವೃದ್ಧಿ ಪಡಿಸಲು ಸಮಗ್ರ ಕೃಷಿ ಪದ್ಧತಿ ಅಳವಡಿಸುವುದು, ರೈತರ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಹವಾಮಾನ ಮತ್ತು ಸ್ಥಳೀಯ ಸನ್ನಿವೇಶಕ್ಕೆ ಅನುಗುಣವಾಗಿ, ಕೃಷಿ, ತೋಟಗಾರಿಕೆ, ಆಗ್ರೋ ಫಾರೆಸ್ಟ್ರಿ, ಜಾನುವಾರು ಸಾಕಾಣಿಕೆ, ಮೀನುಗಾರಿಕೆ, ಜೇನು ಹುಳು ಸಾಕಾಣಿಕೆ ಚಟುವಟಿಕೆಗಳನ್ನು ಅಳವಡಿಸುವುದು ಯೋಜನೆಯ ಕಾರ್ಯಕ್ರಮವಾಗಿರುತ್ತದೆ.

 

ಯೋಜನೆಯಡಿ ಅನುಷ್ಠಾನಗೊಳಿಸಲಾಗುವ ಘಟಕಗಳು ಹಾಗೂ ಸಹಾಯಧನ ಪ್ರಮಾಣದ ವಿವರಗಳು:

ಕ್ರ.ಸಂ ಘಟಕಗಳು ಸಹಾಯಧನ (ರೂಗಳಲ್ಲಿ. ಪ್ರತಿ .ಹೆ.)
  1. ಸಮಗ್ರ ಕೃಷಿ ಪದ್ದತಿಗಳು  
1. ತೋಟಗಾರಿಕಾ ಸಂಬಂಧಿತ ಬೇಸಾಯ ಪದ್ದತಿಗಳು 25000
2. ಪಶುಸಂಗೋಪನೆ ಆಧಾರಿತ ಬೇಸಾಯ ಪದ್ದತಿಗಳು (ಹಸು/ಎಮ್ಮೆ+ ಬೆಳೆ ಪದ್ದತಿ) 40000
3. ಅರಣ್ಯ-ಹುಲ್ಲುಗಾವಲು ಪದ್ದತಿ/ಸಾಂಪ್ರದಾಯಕವಲ್ಲದ ಅರಣ್ಯ ಉತ್ಪನ್ನಗಳು 15000
4. ಮರ/ಅರಣ್ಯ ಸಂಬಂಧಿತ ಬೇಸಾಯ ಪದ್ದತಿ (ಬೆಳೆ ಪದ್ದತಿ: ಏಕದಳ/ದ್ವಿದಳ/ಎಣ್ಣೆಕಾಳು/ನಾರು ಬೆಳೆ ಮತ್ತು ಬೇಲಿಸಾಲು ಬೆಳೆ - ನುಗ್ಗೆ/ಪರಂಗಿ ಮುಂತಾದುವು 15000
  2. ಮೌಲ್ಯವರ್ಧನೆ ಮತ್ತು ಸಂಪನ್ಮೂಲಗಳ ಸಂರಕ್ಷಣೆ  
1. ಜೇನು ಸಾಕಾಣಿಕೆ ಘಟಕ (ಪ್ರತಿ ಘಟಕಕ್ಕೆ) 800
2. ರಸಮೇವು ಸಂಸ್ಕರಣಾ ಘಟಕ (ಪ್ರತಿ ಘಟಕಕ್ಕೆ) 125000
3. ಸಮುದಾಯ ಕೆರೆ 2000000
4. ನೀರು ಹಾಯಿಸುವ ಘಟಕಗಳು 10000
5. ನೀರು ಎತ್ತುವ ಘಟಕಗಳು 15000
6. ಸ್ಥಳೀಯ ತೇವಾಂಶ ಸಂರಕ್ಷಣಾ ಕ್ರಮಗಳು 4000
7. ಎರೆಹುಳು ಗೊಬ್ಬರ ಘಟಕ (ಪ್ರತಿ ಘಟಕಕ್ಕೆ) 50000
8. ಸಮಗ್ರ ಕೃಷಿ ಪದ್ದತಿ ಮತ್ತು ಸಂಪನ್ಮೂಲ ಸಂರಕ್ಷಣೆ ತರಬೇತಿ( ಪ್ರತಿ ತರಬೇತಿಗೆ) 10000

ಕೇಂದ್ರ ಪುರಸ್ಕೃತ/ರಾಜ್ಯ ಪುರಸ್ಕೃತ ಯೋಜನೆ ಹಾಗೂ ಸಹಾಯಧನದ ಪ್ರಮಾಣದ ವಿವರಗಳು:

ಕೇಂದ್ರ ಪುರಸ್ಕೃತ ಯೋಜನೆ - 50%

ಎನ್ಎಂಎಸ್ಎ ಕಾರ್ಯಾಚರಣೆಯ ಮಾರ್ಗಸೂಚಿಗಳ ವಿವರಗಳು

ಎನ್ಎಂಎಸ್ಎ ಕಾರ್ಯಾಚರಣೆ ಮಾರ್ಗಸೂಚಿಗಳು, ಪರಿಚಯ ಮತ್ತು ಉದ್ದೇಶಗಳು

ಇತ್ತೀಚಿನ ನವೀಕರಣ​ : 05-06-2020 12:24 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080