ಅಭಿಪ್ರಾಯ / ಸಲಹೆಗಳು

ಪಿಎಂಕೆಎಸ್ವೈ - ಒಐ- ಪಿಡಿಎಂಸಿ

ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ-ಇತರ ಉಪಚಾರಗಳು- ಪ್ರತಿ ಹನಿಗೂ ಹೆಚ್ಚು ಬೆಳೆ - (ಪಿಎಂಕೆಎಸ್ವೈ - ಒಐ- ಪಿಡಿಎಂಸಿ)

ಕಾರ್ಯಕಾರಿ ಮಾರ್ಗಸೂಚಿಗಳು

2015-16 ನೇ ಸಾಲಿನಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಯಿ-ಇತರೆ ಉಪಚಾರಗಳು ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯವು ಶೇ.60:40 ರ ಕೇಂದ್ರ ಮತ್ತು ರಾಜ್ಯದ ಪಾಲಿನ ಅನುಪಾತದೊಂದಿಗೆ ಅನುದಾನ ಮಂಜೂರಾತಿ ನೀಡುತ್ತಿದೆ.  ಈ ಯೋಜನೆಯು ಮುಖ್ಯವಾಗಿ ನೀರಿನ ಮೂಲಗಳನ್ನು ರಚನೆ ಮಾಡಲು ಉದ್ದೇಶಿಸಲಾಗಿದೆ.  ಪ್ರಮುಖ ನೀರಿನ ರಚನೆಗಳಾದ ತಡೆಅಣೆ, ಕಿಂಡಿಅಣೆ, ನಾಲಾಬದು, ಚಿಕ್ಕ ಜಿನುಗು ಕೆರೆ, ಗೋಕಟ್ಟೆ ಮತ್ತು ಇತರೆ ನೀರು ಸಂಗ್ರಹಣಾ ವಿನ್ಯಾಸಗಳನ್ನು ಈ ಯೋಜನೆಯಡಿ ಅನುಷ್ಠಾನ ಮಾಡಲಾಗುತ್ತಿದೆ.

 • ಕಾರ್ಯಕ್ರಮವನ್ನು ನಿರ್ವಹಿಸುವುದು, ರಾಜ್ಯ/ ಜಿಲ್ಲಾ ನೀರಾವರಿ ಯೋಜನೆಗಳನ್ನು ಸಿದ್ಧಪಡಿಸುವುದು, ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವುದು, ಮೇಲ್ವಿಚಾರಣೆ ನಡೆಸುವುದು, ಇತ್ಯಾದಿ;
 • ವಿಭಾಗ/ಜಿಲ್ಲಾ ನೀರಾವರಿ ಯೋಜನೆಯ ಅನುಸಾರ, ತ್ವರಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (ಎಐಬಿಪಿ), ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ (ಪ್ರತಿ ಹೊಲಕ್ಕೆ ನೀರು), ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ (ಜಲಾನಯನ ಅಭಿವೃದ್ದಿ) ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳ ಅಡಿಯಲ್ಲಿ ನೆರವು ಪಡೆಯದಿರುವ ಕೊಳವೆ ಬಾವಿಗಳು ಮತ್ತು ತೋಡು ಬಾವಿಗಳನ್ನು (ಅಂತರ್ಜಲ ಲಭ್ಯವಿರುವಂಥ ಹಾಗೂ ಅರೆ-ಗಂಭೀರ/ಗಂಭೀರ/ಅತಿಯಾಗಿ ಬಳಕೆಗೊಂಡ ಪ್ರವರ್ಗಕ್ಕೆ ಸೇರಿದಂಥ ಪ್ರದೇಶಗಳಲ್ಲಿ) ಒಳಗೊಂಡಂತೆ, ಪೂರಕ ಜಲಮೂಲವನ್ನು ಸೃಜಿಸಲು ಕಿರು ನೀರಾವರಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವುದು.
 • ಕೃಷಿ ಭೂಮಿಯಲ್ಲಿ ಪರಿಣಾಮಕಾರಿ ನೀರು ನಿರ್ವಹಣೆ ಮೂಲಕ, ಬೇಸಿಗೆ ಕಾಲದಲ್ಲಿ ನೀರನ್ನು ಬಳಸಿಕೊಳ್ಳುವುದಕ್ಕಾಗಿ, ನೀರು ವಿಫುಲವಾಗಿ ಲಭ್ಯವಿರುವಾಗ (ಮಳೆಗಾಲ) ಅದನ್ನು ಸಂಗ್ರಹಿಸಲು ಅಥವಾ ತೊರೆಗಳಂಥ (ಹೊನಲು) ಸರ್ವಋತು ಜಲಮೂಲಗಳಿಂದ ನೀರನ್ನು ಸಂಗ್ರಹಿಸಲು, ಕಾಲುವೆ ವ್ಯವಸ್ಥೆಯ ತುದಿಯಲ್ಲಿ ಎರಡನೇ ಸಂಗ್ರಹಣಾ ನಿರ್ಮಿತಿ (ಸಂರಚನೆ)ಗಳನ್ನು ನಿರ್ಮಿಸುವುದು;
 • ನೀರು ಸಾಗಿಸುವ ಪೈಪುಗಳು ಮತ್ತು ನೆಲೆದಡಿಯಲ್ಲಿ ಅಳವಡಿಸಲಾದ ಪೈಪ್ ವ್ಯವಸ್ಥೆ ಸೇರಿದಂತೆ ಡೀಸೆಲ್/ವಿದ್ಯುತ್/ಸೋಲಾರ್ ಪಂಪ್‍ಸೆಟ್‍ಗಳಂಥ ನೀರೆತ್ತುವ ಸಾಧನಗಳನ್ನು ಅಳವಡಿಸುವುದು.

 

ಇತ್ತೀಚಿನ ನವೀಕರಣ​ : 13-09-2022 05:06 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080