ಅಭಿಪ್ರಾಯ / ಸಲಹೆಗಳು

ಪಿಎಂಕೆಎಸ್ವೈ - ಡಬ್ಲ್ಯೂಡಿಸಿ

ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ – ಜಲಾನಯನ ಅಭಿವೃದ್ಧಿ ಘಟಕ -(ಹಿಂದಿನ ಸಮಗ್ರ ಜಲಾನಯನ ನಿರ್ವಹಣೆ ಕಾರ್ಯಕ್ರಮ)

 
1. ಸಾಮಾನ್ಯ ಮಾರ್ಗಸೂಚಿಗಳು 2008(ಪರಿಷ್ಕೃತ ಆವೃತ್ತಿ-2011)
2. ಪಿಎಂಕೆಎಸ್ವೈ-ಡಬ್ಲ್ಯೂಡಿಸಿ-ಜೀವನಾಧಾರಗಳು, ಉತ್ಪಾದನಾ ವ್ಯವಸ್ಥೆ ಮತ್ತು ಕಿರು ಉದ್ಯಮಗಳು
3. ಜಲಾನಯನ ಸಮಿತಿ ಮಾರ್ಗಸೂಚಿಗಳು
4. ಪ್ರದೇಶಾಭಿವೃದ್ಧಿ ಕಾರ್ಯಕ್ರಾಮದ ಹರಿಯಾಲಿ - II ಮಾರ್ಗಸೂಚಿಗಳು
5. ನಮ್ಯ ನಿಧಿ
6. ಸಂಸದರ ಆದರ್ಶ್ ಗ್ರಾಮ ಯೋಜನಾ ಮಾರ್ಗಸೂಚಿಗಳು

 

ಸಮಗ್ರ ಜಲಾನಯನ ನಿರ್ವಹಣೆ ಕಾರ್ಯಕ್ರಮ (IWMP) ವನ್ನು ಕೇಂದ್ರ ಸರ್ಕಾರದ ಸಾಮಾನ್ಯ ಮಾರ್ಗಸೂಚಿ-2008 ರ ಅನ್ವಯ 2009-10 ನೇ ಸಾಲಿನಿಂದ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಿಂದೆ ಜಾರಿಯಲ್ಲಿದ್ದ ಮರುಭೂಮಿ ಅಭಿವೃದ್ದಿ ಯೋಜನೆ, ಬರಪೀಡಿತ ಪ್ರದೇಶ ಅಭಿವೃದ್ದಿ ಯೋಜನೆ ಹಾಗೂ ಸಮಗ್ರ ಬಂಜರು ಅಭಿವೃದ್ದಿ ಯೋಜನೆಗಳನ್ನು ಒಟ್ಟುಗೂಡಿಸಿ ಸಮಗ್ರ ಜಲಾನಯನ ನಿರ್ವಹಣೆ ಕಾರ್ಯಕ್ರಮವನ್ನು ಸಾಮಾನ್ಯ ಮಾರ್ಗಸೂಚಿ-2008 (ಪರಿಷ್ಕರಿಸಿದ ಆವೃತ್ತಿ-2011) ರ ಪ್ರಕಾರ ಅನುಷ್ಠಾನಗೊಳಿಸಲಾಗುತ್ತಿದೆ.


ಈ ಯೋಜನೆಯು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು, 2014-15 ನೇ ಸಾಲಿನ ವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 90:10 ಅನುಪಾತದಲ್ಲಿ ಅನುದಾನವನ್ನು ಭರಿಸುತ್ತಿದ್ದವು. 2015-16ನೇ ಸಾಲಿನಿಂದ ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ – ಜಲಾನಯನ ಅಭಿವೃದ್ಧಿ ಘಟಕ ಎಂದು ಮರುನಾಮಕರಣ ಮಾಡಲಾಗಿದೆ ಮತ್ತು ಪ್ರಸ್ತುತ ಸಾಲಿನಿಂದ ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮದ ಚಟುವಟಿಕೆಗಳನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ-ಜಲಾನಯನ ಅಭಿವೃದ್ಧಿ ಯಡಿ (erstwhile IWMP) ಅನುಷ್ಠಾನ ಮಾಡಲಾಗುತ್ತಿದೆ. ಸದರಿ ಯೋಜನೆಗೆ 60:40 ರ ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೆಚ್ಚವನ್ನು ಭರಿಸಲಾಗುತ್ತಿದೆ.

  •  ಮಣ್ಣು, ತೇವಾಂಶ ಮತ್ತು ಪೋಶಕಾಂಶಗಳನ್ನು ಸಂರಕ್ಷಿಸುವುದು. ಅಂತರ್ಜಲವನ್ನು ಅಭಿವೃದ್ದಿಗೊಳಿಸುವುದು
  •  ಕೃಷಿ, ಅರಣ್ಯ ಮತ್ತು ಖುಷ್ಕಿ ತೋಟಗಾರಿಕೆ ಮೂಲಕ “ಹಸಿರು ಹೊದಿಕೆ”ಯನ್ನು ವೃದ್ದಿಗೊಳಿಸುವುದು
  •  ಮೇವು ಮತ್ತು ಉರವಲು ಪೂರೈಕೆಯನ್ನು ಉತ್ತಮಗೊಳಿಸುವುದು
  •  ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು
  •  ಸಮುದಾಯ ಸಂಘಟನೆ ಮತ್ತು ಸಾಮರ್ಥ್ಯ ಬಲವರ್ಧನೆ ಹಾಗೂ ಪಶು ಸಂಪತ್ತಿನ ಅಭಿವೃದ್ದಿಯನ್ನು ಉತ್ತೇಜಿಸುವುದು
  •  ಭೂ ರಹಿತರಿಗೆ ಜೀವನಾಧಾರಿತ ಬೆಂಬಲ ಚಟುವಟಿಕೆಗಳನ್ನು ಒದಗಿಸುವುದು
  •  ಉತ್ಪಾದನಾ ವ್ಯವಸ್ಥೆ ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳು ಮತ್ತು ಕಿರು ಉದ್ದಿಮೆಗಳನ್ನು ಪ್ರೋತ್ಸಾಹಿಸುವುದು
  •  ಹರಿಯುವ ನೀರಿನ ಪರಿಣಾಮಕಾರಿ ನಿರ್ವಹಣೆ ಮತ್ತು ಸುಧಾರಿತ ಮಣ್ಣು ಹಾಗೂ ತೇವಾಂಶ ಸಂರಕ್ಷಣೆ ಕಾರ್ಯಕ್ರಮಗಳ ಜಲಾನಯನ ಉಪಚಾರಗಳನ್ನು ಮೇಲ್‍ಸ್ಥರ, ಮಧ್ಯಸ್ಥರ ಮತ್ತು ಕೆಳಸ್ಥರಗಳಲ್ಲಿ ಕೈಗೊಳ್ಳುವುದು. ಮಳೆನೀರು ಕೊಯ್ಲಿನ ಮುಖೇನ ಮೂಲ ತೇವಾಂಶ ಸಂರಕ್ಷಣೆ ಮತ್ತು ಇತರ ಜಲಾನಯನ ಆಧಾರಿತ ಚಟುವಟಿಕೆಗಳ ಅನುಷ್ಠಾನ ಮಾಡುವುದು
  •  ಮಳೆಯಾಶ್ರಿತ ಪ್ರದೇಶಗಳಲ್ಲಿ ಸಾಂಪ್ರಾಧಾಯಿಕ ನೀರಿನ ಮೂಲಗಳ ನವೀಕರಣ ಸೇರಿದಂತೆ, ನೀರಿನ ಮೂಲಗಳ ಸೃಷ್ಟಿಗೆ ಸದರಿ ಕಾರ್ಯಕ್ರಮಗಳನ್ನು ನರೇಗಾ ಕಾರ್ಯಕ್ರಮದ ಜೊತೆ ಒಗ್ಗೂಡಿಸಿ ಅನುಷ್ಠಾನ ಮಾಡುವುದು

ಜಲಾನಯನ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಮಾಡುವ ಮೊದಲು ಜಲಾನಯನ ಪ್ರದೇಶಗಳನ್ನು ಈ ಕೆಳಗಿನ ಮಾನದಂಡಗಳ ಮೇಲೆ ಆಯ್ಕೆ ಮಾಡಲಾಗುವುದು

  1. ಬಡತನದ ಸೂಚ್ಯಂಕ
  2. ಶೇಕಡಾವಾರು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪ್ರಮಾಣ
  3. ನೈಜ ಕೂಲಿ (Actual wages)
  4. ಶೇಕಡಾವಾರು ಸಣ್ಣ/ಅತಿಸಣ್ಣ ರೈತರ ಪ್ರಮಾಣ
  5. ಅಂತರ್ಜಲದ ಸ್ಥಿತಿ
  6. ಡಿ.ಪಿ.ಎ.ಪಿ ಮತ್ತು ಡಿ.ಡಿ.ಪಿ ತಾಲ್ಲೂಕುಗಳ ತೇವಾಂಶ ಸೂಚಕ
  7. ಮಳೆಯಾಶ್ರಿತ ಕೃಷಿಗೆ ಒಳಪಟ್ಟ ಪ್ರದೇಶ
  8. ಕುಡಿಯುವ ನೀರಿನ ಲಭ್ಯತೆ
  9. ಬಂಜರು ಪ್ರದೇಶದ ಭೂಮಿ
  10. ಭೂಮಿಯ ಉತ್ಪಾದನಾ ಸಾಮರ್ಥ್ಯ
  11. ಈಗಾಗಲೇ ಅಭಿವೃದ್ಧಿಯಾಗಿರುವ/ಉಪಚರಿಸಿರುವ ಇನ್ನೊಂದು ಜಲಾನಯನದ ಸಮೀಪದಲ್ಲಿ ಇರಬೇಕು
  12. ಗೊಂಚಲು ಕಿರುಜಲಾನಯನಗಳು (ಒಂದಕ್ಕಿಂತ ಹೆಚ್ಚಿನ ಕಿರುಜಲಾನಯನಗಳು)

ಈ ಮೇಲಿನ ಮಾನದಂಡಗಳನ್ನು ಬಳಸಿಕೊಂಡು ಯೋಜನಾ ಪ್ರದೇಶವನ್ನು ಆಯ್ಕೆಮಾಡಿದ ನಂತರ ಕಾರ್ಯಕ್ರಮದ ಚಟುವಟಿಕೆಗಳನ್ನು 3 ಹಂತಗಳಲ್ಲಿ ಅನುಷ್ಠಾನ ಮಾಡಲಾಗಿದೆ.

  1. ಅ) ಯೋಜನೆ ಪೂರ್ವ: ಈ ಹಂತದಲ್ಲಿ ಯೋಜನೆಯ ಅನುಷ್ಠಾನಕ್ಕೆ ಮುನ್ನ ಯೋಜನಾ ವ್ಯಾಪ್ತಿಯ ಜನರ ವಿಶ್ವಾಸವನ್ನು ಗಳಿಸಲು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ (Natural Resources Management)ಸಂಬಂದಿಸಿದ ಯೋಜನಾಪೂರ್ವ ಚಟುವಟಿಕೆಗಳನ್ನು ಅನುಷ್ಠಾನ ಮಾಡಲಾಗಿದೆ. ಇದಲ್ಲದೇ ಅರಿವು ಮೂಡಿಸುವ ಕಾರ್ಯಕ್ರಮಗಳು, ವಿಸ್ತೃತ ಯೋಜನಾ ವರದಿಯ ತಯಾರಿಕೆ ಮತ್ತು ವಿಸ್ತೃತ ಯೋಜನಾ ವರದಿಯ ಅನುಮೋದನಾ ವರದಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದ ಜಿಲ್ಲಾ ಮಟ್ಟದ ಮಂಜೂರಾತಿ ಸಮಿತಿಯಲ್ಲಿ ಅನುಮೋದನೆ ಜಲಾನಯನ ಸಮಿತಿಗಳ ಮೂಲಕ ಜಲಾನಯನ ಚಟುವಟಿಕೆಗಳನ್ನು ಅನುಷ್ಠಾನ ಮಾಡಲಾಗಿರುತ್ತದೆ.
  2. ಆ) ಜಲಾನಯನ ಕಾಮಗಾರಿಗಳ ಅನುಷ್ಠಾನ ಹಂತ : ಗ್ರಾಮ ಸಭೆಯಲ್ಲಿ ಅನುಮೋದನೆಗೊಂಡಂತಹ ಚಟುವಟಿಕೆ/ಕಾಮಗಾರಿಗಳಿಗೆ ವರ್ಷವಾರು ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಷ್ಠಾನ ಮಾಡಲಾಗಿದೆ. ಅಂದರೆ ಭೂ ಸಾರ ಸಂರಕ್ಷಣೆ ಚಟುವಟಿಕೆಗಳಾದ ಬದು ಕಾಮಗಾರಿ, ಕೃಷಿ ಹೊಂಡ, ತಡೆಅಣೆ, ನಾಲಾಬದು, ಜಿನುಗು ಕೆರೆ ಮೊದಲಾದ ಕಾಮಗಾರಿಗಳಿಂದ ಬಿದ್ದಂತಹ ಮಳೆ ನೀರು ಸಂಗ್ರಹಣೆ ಮಾಡಿ ಇಂಗಿಸಿ, ಮಣ್ಣು ಸಂರಕ್ಷಣೆಯನ್ನು ಕೂಡ ನಿರ್ವಹಿಸಲಾಗಿದೆ. ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಮತ್ತು ಮೀನುಗಾರಿಕೆಗಳಿಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಅನುಷ್ಠಾನ ಮಾಡಲಾಗಿದೆ. ಉತ್ಪಾದನಾ ವ್ಯವಸ್ಥೆ ಮತ್ತು ಕಿರು ಉದ್ದಿಮೆಗಳ ಘಟಕದಡಿ ಚಟುವಟಿಕೆಗಳ ಅನುಷ್ಠಾನ, ಸ್ವಸಹಾಯ ಗುಂಪುಗಳಿಗೆ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹ ನೀಡಲಾಗಿದೆ.
  3. ಇ) ಕ್ರೋಢಿಕರಣ ಮತ್ತು ಹಿಂಪಡೆಯುವಿಕೆ ಹಂತ: ಯೋಜನೆಯ ಎಲ್ಲಾ ಚಟುವಟಿಕೆಗಳನ್ನು ಅನುಷ್ಠಾನ ಮಾಡಿದ ನಂತರ ಅಭಿವೃದ್ಧಿಪಡಿಸಲಾದ ನೈಸರ್ಗಿಕ ಸಂಪನ್ಮೂಲಗಳನ್ನು ನಿರಂತರವಾಗಿ ನಿರ್ವಹಿಸುವುದು, ಭವಿಷ್ಯದ ಬಳಕೆಗಾಗಿ ಅನುಭವಗಳ ಹಾಗೂ ಕಲಿತ ಪಾಠಗಳ ದಾಖಲೆ ಇಡುವುದು.

 

ಇತ್ತೀಚಿನ ನವೀಕರಣ​ : 06-06-2022 03:51 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080