ಅಭಿಪ್ರಾಯ / ಸಲಹೆಗಳು

ಆರ್ ಕೆ ವಿ ವೈ - ತಡೆಆಣೆ

 

  ಪರಿಚಯ


ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ- ತಡೆ ಅಣೆ ಕಾರ್ಯಕ್ರಮವು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವೆ ಶೇ. 60:40 ರ ಹಂಚಿಕೆ ಅನುಪಾತದಲ್ಲಿ ಅನುದಾನ ಒದಗಿಸಲಾಗುತ್ತದೆ. ಕಾರ್ಯಕ್ರಮವು 2017-18 ನೇ ಸಾಲಿನಿಂದ ಚಾಲ್ತಿಯಲ್ಲಿರುತ್ತದೆ.

 


ಮಳೆ ನೀರು ಕೊಚ್ಚಣೆಯಿಂದ ಹಳ್ಳದ ಮೂಲಕ ಹರಿಯುವ ನೀರನ್ನು ಸಂಗ್ರಹಿಸಿ ಅಂತರ್ಜಲ ವೃದ್ಧಿ ಪ್ರಮುಖ ಉದ್ದೇಶವಾಗಿರುತ್ತದೆ. ಜಾನುವಾರುಗಳಿಗೆ ಕುಡಿಯುವ ನೀರೊದಗಿಸುವುದು ಹಾಗೂ ಬೆಳೆಗಳಲ್ಲಿ ರಕ್ಷಣಾತ್ಮಕ ನೀರಾವರಿ ಕೈಗೊಳ್ಳಲು

2023-24 ನೇ ಸಾಲಿಗೆ ರೂ.2000.00 ಲಕ್ಷಗಳ ಅನುದಾನದೊಂದಿಗೆ 400 ತಡೆ ಅಣೆ/ಕಿಂಡಿ ಅಣೆಗಳ ಅನುಷ್ಟಾನಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ.

RKVY ಯೋಜನೆಯ ಸಾಮಾನ್ಯ ಮಾರ್ಗಸೂಚಿಗಳ ಜೊತೆಗೆ ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಪಾಲಿಸುವುದು.

  • ಅನುಷ್ಠಾನ ಮಾಡಲಾಗುವ ತಡೆಅಣೆಗಳು ಕಡ್ಡಾಯವಾಗಿ ಜಿಲ್ಲಾ ನೀರಾವರಿ ಯೋಜನೆಯ ಭಾಗವಾಗಿರಬೇಕು.
  • ಸಮುದಾಯ/ವ್ಯಕ್ತಿಗತ ತಡೆಅಣೆಗಳನ್ನು ವೈಜ್ಞಾನಿಕವಾಗಿ ಸೂಕ್ತವಾಗಿರುವ ಸ್ಥಳಗಳಲ್ಲಿ ಗುರುತಿಸಿ Run off ಲಭ್ಯತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
  • ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ರೈತರ ಜಮೀನಿನಲ್ಲಿ ಅಥವಾ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಜನರು ಪ್ರಾಬಲ್ಯವಿರುವ ಹಳ್ಳಿಗಳಲ್ಲಿ ನೀರು ಸಂಗ್ರಹಣಾ ವಿನ್ಯಾಸ/ತಡೆಅಣೆಗಳ ರಚನೆಗಳನ್ನು ಕ್ರಿಯಾಯೋಜನೆಯಲ್ಲಿ ಕಡ್ಡಾಯವಾಗಿ ಅಳವಡಿಸುವುದು.
  • ತಾಲ್ಲೂಕುಗಳಿಗೆ RKVY-ತಡೆಅಣೆ ಕಾರ್ಯಕ್ರಮದಡಿ ಕ್ರಿಯಾಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ಜಿಲ್ಲೆಗಳು ಅಟಲ ಭೂಜಲ ಯೋಜನೆಯಡಿ ಆಯ್ಕೆಯಾಗಿದ್ದಲ್ಲಿ ಆಯಾ ತಾಲ್ಲೂಕುಗಳ ಕ್ರಿಯಾಯೋಜನೆಯಲ್ಲಿ ಪ್ರಸ್ತಾಪಿಸಿರುವ ತಡೆಅಣೆ ಘಟಕಗಳನ್ನು ಪರಿಗಣನೆಯಲ್ಲಿರಿಸಿ ಕ್ರಮ ವಹಿಸುವುದು.
  • ಜಿಲ್ಲೆಗಳಿಗೆ ಕಳುಹಿಸಿರುವ/ ಜಿಲ್ಲೆಗಳಲ್ಲಿ ಸ್ವೀಕರಿಸಿರುವ ಮನವಿಗಳನ್ನು ಪರಿಶೀಲಿಸಿ ಅರ್ಹ ಪ್ರಸ್ತಾವನೆಗಳನ್ನು ಕ್ರಿಯಾ ಯೋಜನೆಯಲ್ಲಿ ಪರಿಗಣಿಸುವ ಬಗ್ಗೆ ಕ್ರಮ ವಹಿಸುವುದು.

 

ಆಯ್ಕೆಯಾದ ಯೋಜನಾ ಪ್ರದೇಶದ ವ್ಯಾಪ್ತಿಯ ಎಲ್ಲಾ ರೈತರು ಮತ್ತು ಆಸ್ತಿರಹಿತ ಕೂಲಿ ಕಾರ್ಮಿಕರು ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

  1. ಅಂತರ್ಜಲ ಸಂಪನ್ಮೂಲಗಳ ಮಿತಿಮೀರಿದ ಬಳಕೆಯಗುತ್ತಿರುವಪ್ರದೇಶಗಳನ್ನು ಪರಿಗಣಿಸುವುದು.
  2. ನೀರಿನ ಅಭಾವ ತೀವ್ರವಾಗಿರುವ ಪ್ರದೇಶಗಳು.
  3. ಬಂಜರು ಪ್ರದೇಶಗಳು/ಸವಕಳಿಯಾದ ಪ್ರದೇಶಗಳು ಹೆಚ್ಚಾಗಿರುವುದು.
  4. ಈಗಾಗಲೇ ಅಭಿವೃದ್ಧಿಯಾಗಿರುವ/ಉಪಚರಿಸಿರುವ ಇನ್ನೊಂದು ಜಲಾನಯನದ ಸಮೀಪದಲ್ಲಿ ಇರಬೇಕು.
  5. ಸ್ವಇಚ್ಛಾ ವಂತಿಗೆಗಳನ್ನು ನೀಡುವುದಕ್ಕೆ ಹಾಗೂ ಸೃಜಿಸಲಾದ ಆಸ್ತಿಗಳನ್ನು ನಿರ್ವಹಣೆ ಮಾಡುವುದಕ್ಕೆ ಇರುವ ಗ್ರಾಮ ಸಮುದಾಯದ ಒಪ್ಪಿಗೆ ಇರಬೇಕು.
  6. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅನುಪಾತ ಪಾಲಿಸುವುದು.
  7. ಯೋಜನಾ ಪ್ರದೇಶವು ಖಾತ್ರಿ ನೀರಾವರಿಯ ವ್ಯಾಪ್ತಿಗೆ ಒಳಪಡಬಾರದು.
  8. ಭೂಮಿಯ ಉತ್ಪಾದಕತೆ ಸಾಮರ್ಥ್ಯ ಕಡಿಮೆಯಾಗಿರುವುದು.

 

ಇತ್ತೀಚಿನ ನವೀಕರಣ​ : 17-11-2023 06:23 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080