ಅಭಿಪ್ರಾಯ / ಸಲಹೆಗಳು

ಆರ್‌ ಕೆ ವಿ ವೈ - ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆ

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಉಪ-ಯೋಜನೆಗಳು- ಸಮಸ್ಯಾತ್ಮಕ ಮಣ್ಣಿನ ಸುಧಾರಣೆ(ಆರ್‌ ಕೆ ವಿ ವೈ)


 

ಪರಿಚಯ

ಖುಷ್ಕಿ ಮತ್ತು ಮಳೆಯಾಶ್ರಿತ ಕೃಷಿ ಪದ್ಧತಿಯಲ್ಲಿ ಸಮಸ್ಯಾತ್ಮಕ ಮಣ್ಣುಗಳ ತೊಂದರೆ (ಕ್ಷಾರೀಯ, ಲವಣಯುಕ್ತ ಮತ್ತು ಆಮ್ಲ) ದಿನೇ ದಿನೇ ಹೆಚ್ಚಾಗುತ್ತಿದ್ದು,  ಅವುಗಳ ಸುಧಾರಣೆಗೆ ಕೇಂದ್ರ ಪುರಸ್ಕೃತ ಯೋಜನೆಯನ್ನು ರೂಪಿಸುವಂತೆ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ ಡಿ ಸಿ) ಯ ಉಪ ಸಮಿತಿಯಿಂದ ಶಿಫಾರಸು ಮಾಡಲ್ಪಟ್ಟಿದೆ. ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆಗೆ 2016-17ರಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್ ಕೆ ವಿ ವೈ) ಯ ಉಪ ಯೋಜನೆಯಾಗಿ ಪರಿಚಯಿಸಲಾಗಿದೆ. ಆಯ್ದ ಸಂಭಾವ್ಯ ರಾಜ್ಯಗಳಲ್ಲಿ ಪೈಲಟ್ ಆಧಾರದ ಮೇಲೆ ಈ ಯೋಜನೆಯನ್ನು ಜಾರಿಗೊಳಿಸಿದ ನಂತರ, ಸ್ವತಂತ್ರ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ತೆಗೆದುಕೊಳ್ಳಲಾಗುತ್ತದೆ.

ಉದ್ದೇಶ

ಅ. ಸಮಸ್ಯೆಯ ಮಣ್ಣುಗಳನ್ನು ಮರುಪಡೆದುಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು (ಕ್ಷಾರೀಯತೆ, ಲವಣಾಂಶ ಮತ್ತು ಆಮ್ಲತೆಗಳಿಂದ ಪ್ರಭಾವಿತವಾಗಿರುವ ಭೂಮಿಗಳು).

ಆ. ನಿರ್ದಿಷ್ಟ ಪ್ರದೇಶದ ಅವಶ್ಯಕತೆಯನ್ನಾಧರಿಸಿ ಕೃಷಿ ಅಭಿವೃದ್ಧಿ, ಜೈವಿಕ ಇಂಜಿನಿಯರಿಂಗ್ ಕ್ರಮಗಳು ಮತ್ತು ಮಣ್ಣಿನ  ಸುಧಾರಣೆಯನ್ನು ಪ್ರಾಯೋಜನೆ ತತ್ವಾಧಾರದಲ್ಲಿ  ಅಳವಡಿಸುವುದು.

ಇ. ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆಯನ್ನು ವೃದ್ಧಿಸಲು ಮಣ್ಣಿನ ಪರೀಕ್ಷೆಯ ಆಧಾರದ   ರಸಗೊಬ್ಬರಗಳ ವಿವೇಚನಾಯುಕ್ತ ಬಳಕೆ,  ಲಘುಪೋಷಕಾಂಶಗಳ ಬಳಕೆ.

ಈ. ದೇಶದ ಆಹಾರ ಭದ್ರತೆಗಾಗಿ ಉಪ್ಪಿನ ಸಹಿಷ್ಣು ಬೆಳೆ/ಮರಗಳ ಕೃಷಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಬೆಳೆ ಇಳುವರಿಯನ್ನು ಹೆಚ್ಚಿಸಲು.

ಉ. ಕ್ಷಾರೀಯತೆ, ಲವಣಾಂಶ ಮತ್ತು ಆಮ್ಲೀಯತೆಯ ಮರು-ಸಂಭವಿಸುವಿಕೆಯನ್ನು ತಡೆಯುವ ಕುರಿತು  ರೈತರು ಮತ್ತು ಇತರೆ ಹೂಡಿಕೆದಾರರಲ್ಲಿ ಅರಿವು ಮೂಡಿಸಲು.

ನಿರೀಕ್ಷಿತ ಫಲಿತಾಂಶ

ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆ (ಕ್ಷಾರೀಯ, ಉಪ್ಪು ಮತ್ತು ಆಮ್ಲೀಯತೆ) ಯೋಜನೆಯ ಅನುಷ್ಟಾನದಿಂದ  ಈ ಕೆಳಗಿನ ಪ್ರಯೋಜನಗಳನ್ನು ನಿರೀಕ್ಷಿಸಬಹುದು:

 1. ಸಮಸ್ಯೆಯ ಮಣ್ಣಿನಿಂದ ಪ್ರಭಾವಿತವಾಗಿರುವ ಪ್ರದೇಶಗಳ ಸುಧಾರಣೆಗೆ ಪ್ರಸ್ತುತ ಮಟ್ಟಕ್ಕೆ ಹೋಲಿಸಿದರೆ ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆಯು ಹೆಚ್ಚಾಗುತ್ತದೆ.
 2. ಸುಧಾರಿತ  ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮುಂಗಾರು ಮತ್ತು ಹಿಂಗಾರು ಬೆಳೆಗಳೆರಡನ್ನೂ  ಬೆಳೆಯುವ ಪದ್ಧತಿಯಿರುವುದರಿಂದ ಬೆಳೆ ತೀವ್ರತೆಯನ್ನು (ಶೇ 200% ರಷ್ಟು)ಹೆಚ್ಚಿಸಬಹುದಾಗಿದೆ.
 3. ರೈತರ ಆದಾಯ ಮತ್ತು ಉದ್ಯೋಗದ ಅವಕಾಶಗಳ ಹೆಚ್ಚಳದಿಂದ ಗ್ರಾಮೀಣ ಪ್ರದೇಶದಿಂದ  ನಗರ ವಲಸೆಯ ಸಮಸ್ಯೆಯನ್ನು ತಗ್ಗಿಸಬಹುದು.
 4. ಹೆಚ್ಚಿನ ಪ್ರದೇಶವು ಹಸಿರು ಬೆಳೆಯಿಂದ ಆವೃತವಾಗುವುದರಿಂದ ಹೆಚ್ಚಿನ  ಇಂಗಾಲವನ್ನು ಸೆಳೆಯಲು ವಾತಾವರಣ ನಿರ್ಮಾಣವಾಗುವುದರಿಂದ  ತನ್ಮೂಲಕ ಹವಾಮಾನ ಬದಲಾವಣೆ ರೂಪಾಂತರ ಮತ್ತು ತಗ್ಗಿಸುವಿಕೆ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ.
 5. ಉತ್ಪಾದಕತೆಯ ಹೆಚ್ಚಳ ಒಟ್ಟಾರೆ ಆಹಾರ ಧಾನ್ಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಇದರಿಂದಾಗಿ ದೇಶದ ಆಹಾರ ಭದ್ರತೆಯನ್ನು ಹೆಚ್ಚಿಸುತ್ತದೆ.

ಇತ್ತೀಚಿನ ನವೀಕರಣ​ : 05-06-2020 12:30 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080