ಅಭಿಪ್ರಾಯ / ಸಲಹೆಗಳು

ರೈತ ಉತ್ಪಾದಕರ ಸಂಸ್ಥೆಗಳು (ಎಫ್ ಪಿ ಒ)

 

 

     ಭಾರತೀಯ ಕೃಷಿ ಕ್ಷೇತ್ರವು ಕಳೆದ ಕೆಲವು ದಶಕಗಳಲ್ಲಿ ದೇಶದ ಬೆಳೆಯುತ್ತಿರುವ ಜನಸಂಖ್ಯೆಗೆ ಅವಶ್ಯಕವಿರುವ ಪ್ರಮುಖ ಆಹಾರ ಧಾನ್ಯಗಳಾದ ಭತ್ತ ಹಾಗೂ ಗೋಧಿಯಂತ ಬೆಳೆಗಳ ಉತ್ಪಾದನೆಯನ್ನು ಮಾಡುವಲ್ಲಿ ಗಮನಾರ್ಹವಾಗಿ ಸಾಧನೆ ಮಾಡಿದೆ. ಆದಾಗ್ಯೂ, ರೈತರು ಅವರ ಕೃಷಿ ಉತ್ಪನ್ನಗಳಿಗೆ ಸೂಕ್ತವಾದ ಬೆಲೆ ಪಡೆಯುವಲ್ಲಿ ಸಫಲರಾಗಿಲ್ಲ ಹಾಗೂ ಬೆಳೆಗಳ ಪೂರ್ಣಪ್ರಮಾಣದ ಸಂಭಾವ್ಯ ಇಳುವರಿಯನ್ನು ಪಡೆಯುವ ಸಾಧನೆಯಾಗಿರುವುದಿಲ್ಲ. ಭೂ ಹಿಡುವಳಿಗಳ ಉಪವಿಭಜನೆ ಹಾಗೂ ವಿಘಟನೆ, ಅರಿವಿನ ಕೊರತೆ, ಹೊಸ ತಂತ್ರಜ್ಞಾನಗಳ ಅಳವಡಿಕೆಯಡೆಗೆ ಇರುವ ಇಚ್ಛಾಶಕ್ತಿಯ ಕೊರತೆ ಇತ್ಯಾದಿಯಾಗಿ ಸಂಭಾವ್ಯ ಇಳುವರಿಗೆ ಹೋಲಿಸಿದಾಗ ಅತಿ ಕಡಿಮೆ ಇಳುವರಿಯ ಮಟ್ಟ ಸಾಧಿಸಿರುವುದು ಕಂಡುಬರುತ್ತದೆ. ಸಾಕಷ್ಟು ಮಾರುಕಟ್ಟೆ ಮೂಲ ಸೌಕರ್ಯದ ಕೊರತೆ, ಮಧ್ಯವರ್ತಿಗಳ ನಿರಂತರ ಹಸ್ತಕ್ಷೇಪ ಸಂಘಟನಾ ಪ್ರಯತ್ನಗಳ ಕೊರತೆಯಂತಹ ಕಾರಣಗಳಿಂದಾಗಿ ರೈತರಿಗೆ ಅತಿ ಕಡಿಮೆ ಮಾರುಕಟ್ಟೆ ಅವಕಾಶಗಳು ಹಾಗೂ ಲಾಭದಲ್ಲಿ ಇಳಿಕೆ ಕಾಣುವಂತಾಗಿದೆ.

 

ಪ್ರಾಥಮಿಕ ಉತ್ಪಾದಕರ ಸಂಘಟನೆ ಅದರಲ್ಲಿಯೂ ಪ್ರಮುಖವಾಗಿ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಉತ್ಪಾದಕರ ಸಂಸ್ಥೆಗಳ ಅಡಿಯಲ್ಲಿ ತರುವ ಪ್ರಯತ್ನವು ಒಂದು ಉದಯೋನ್ಮುಖ ಮಾರ್ಗವಾಗಿ ಹೊರಹೊಮ್ಮುತ್ತಿದ್ದು ಇದು ಕೃಷಿ ಕ್ಷೇತ್ರವು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಅದರಲ್ಲಿಯೂ ಮುಖ್ಯವಾಗಿ ಬಂಡವಾಳ ಹೂಡಿಕೆಗೆ ಸೂಕ್ತ ಅವಕಾಶಗಳು, ತಂತ್ರಜ್ಞಾನಗಳು, ಗುಣಮಟ್ಟದ ಪರಿಕರಗಳ ದೊರೆಯುವಿಕೆ ಹಾಗೂ ಮಾರುಕಟ್ಟೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರಿಯಾಗಿದೆ. ಭಾರತ ಸರ್ಕಾರದ ಕೃಷಿ ಹಾಗೂ ಸಹಕಾರ ಇಲಾಖೆ, ಕೃಷಿ ಹಾಗೂ ರೈತ ಕಲ್ಯಾಣ ಮಂತ್ರಾಲಯವು ರೈತ ಉತ್ಪಾದಕರ ಸಂಸ್ಥೆಯನ್ನು ಒಂದು ಅತ್ಯಂತ ಸೂಕ್ತ ಸಾಂಸ್ಥಿಕ ರಚನೆಯಾಗಿ ಹಾಗೂ ಕಾರ್ಯತಂತ್ರವಾಗಿ ಅಳವಡಿಸುವ ಮೂಲಕ ರೈತರನ್ನು ಒಂದಾಗಿಸಿ ಸಜ್ಜುಗೊಳಿಸುವ ಮೂಲಕ ಅವರ ಸಾಮರ್ಥ್ಯವರ್ಧನೆ ಮಾಡಿ ಸಾಂಘಿಕವಾಗಿ ಅವರ ಉತ್ಪಾದನಾ ಹಾಗೂ ಮಾರುಕಟ್ಟೆ ಬಲಗಳನ್ನು ಗಟ್ಟಿಗೊಳಿಸುವುದೆಂದು ಗುರುತಿಸಿದೆ.

 

ರೈತ ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಣ್ಣ ಹಾಗೂ ಅತಿ ಸಣ್ಣ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವಲ್ಲಿ ಒಬ್ಬಂಟಿಯಾಗಿ ಎದುರಿಸುವ ಹಲವಾರು ಸವಾಲುಗಳನ್ನು ಪರಿಹರಿಸುವುದಾಗಿದೆ. ಉತ್ಪಾದಕರ ಸಂಸ್ಥೆಯಾಗಿ ರೈತ ಉತ್ಪಾದಕರ ಸಂಘವು ಸ್ಥಳಿಯ ರೈತ ಸಮುದಾಯದ ಸಂಧಾನ ಸಾಮರ್ಥ್ಯವನ್ನು ಹಾಗೂ ವ್ಯವಹಾರಿಕ ಪಾಲುದಾರಿಕೆಯನ್ನು ಅಭಿವೃದ್ಧಿಗೊಳಿಸುವ ಮೂಲಕ ರೈತರ ಆರ್ಥಿಕ ಹಾಗೂ ಔದ್ಯಮಿಕ ಸಂಭಾವ್ಯ ಶಕ್ತಿಯನ್ನು ಸಡಿಲಿಸುವಂತೆ ಮಾಡುವುದಾಗಿದೆ. ಈ ಸಂಸ್ಥೆಗಳನ್ನು ಉತ್ಪಾದಕರ ಬೇಡಿಕೆಗೆ ಅನುಗುಣವಾಗಿ ಹಾಗೂ ಮೌಲ್ಯ ಸರಪಳಿಯ ಪದ್ಧತಿಯನ್ನು ಅಳವಡಿಸುವ ಮೂಲಕ ಉತ್ಪಾದಕರ ಆರ್ಥಿಕ ಹಾಗೂ ಸಾಮಾಜಿಕ ಲಾಭಗಳನ್ನು ಹೆಚ್ಚಿಸಲು ರೂಪಿಸಲಾಗಿದೆ.

 

ಕ್ರ. ಸಂ. ವಿಷಯ ದಿನಾಂಕ ಭಾಷೆ ಮೂಲ ಗಾತ್ರ ವೀಕ್ಷಿಸಿ / ಡೌನ್‌ಲೋಡ್‌
1 ರೈತ ಉತ್ಪಾದಕರ ಸಂಸ್ಥೆಗಳ ರಚನೆಗೆ ಸಂಪನ್ಮೂಲ ಸಂಸ್ಥೆಗಳ ಎಂಪ್ಯಾನಲ್‌ ಕುರಿತು 20.09.2019 ಕನ್ನಡ ಆಯುಕ್ತರ ಕಾರ್ಯಾಲಯ ಜಅಇ 1.35 ಎಂಬಿ ವೀಕ್ಷಿಸಿ
2 ರೈತ ಉತ್ಪಾದಕರ ಸಂಸ್ಥೆಗಳ ರಚನೆ ಹಾಗೂ ವ್ಯಾಪಾರ ಅಭಿವೃದ್ಧಿ ಅನುಷ್ಠಾನಕ್ಕೆ ಮಾರ್ಗಸೂಚಿಯ ಕುರಿತು  11.11.2019 ಕನ್ನಡ ಆಯುಕ್ತರ ಕಾರ್ಯಾಲಯ ಜಅಇ 1.19 ಎಂಬಿ ವೀಕ್ಷಿಸಿ
3 ಎಂಪ್ಯಾನಲ್‌ ಆದ ಸಂಪನ್ಮೂಲ ಸಂಸ್ಥೆಗಳಿಗೆ ಇಲಾಖಾ ವತಿಯಿಂದ ರೈತ ಉತ್ಪಾದಕರ ಸಂಸ್ಥೆ ರಚನೆ ಮಾಡಲು ಜಿಲ್ಲೆಗಳನ್ನು ನಿಗದಿಪಡಿಸುವ ಬಗ್ಗೆ 9.01.2020 ಕನ್ನಡ ಆಯುಕ್ತರ ಕಾರ್ಯಾಲಯ ಜಅಇ 0.8 ಎಂಬಿ ವೀಕ್ಷಿಸಿ
4 ಎಂಪ್ಯಾನಲ್‌ ಆದ ಸಂಪನ್ಮೂಲ ಸಂಸ್ಥೆಗಳಿಗೆ ಇಲಾಖಾ ವತಿಯಿಂದ ರೈತ ಉತ್ಪಾದಕರ ಸಂಸ್ಥೆ ರಚನೆ ಮಾಡಲು ಜಿಲ್ಲೆಗಳನ್ನು ನಿಗದಿಪಡಿಸುವ ಬಗ್ಗೆ 10.01.2020 ಕನ್ನಡ ಆಯುಕ್ತರ ಕಾರ್ಯಾಲಯ ಜಅಇ 0.83 ಎಂಬಿ ವೀಕ್ಷಿಸಿ
5 ಎಂಪ್ಯಾನಲ್‌ ಆದ ಸಂಪನ್ಮೂಲ ಸಂಸ್ಥೆಗಳಿಗೆ ಇಲಾಖಾ ವತಿಯಿಂದ ರೈತ ಉತ್ಪಾದಕರ ಸಂಸ್ಥೆ ರಚನೆ ಮಾಡಲು ಜಿಲ್ಲೆಗಳನ್ನು ನಿಗದಿಪಡಿಸುವ ಬಗ್ಗೆ 16.01.2020 ಕನ್ನಡ ಆಯುಕ್ತರ ಕಾರ್ಯಾಲಯ ಜಅಇ 0.24 ಎಂಬಿ ವೀಕ್ಷಿಸಿ
6 ರೈತ ಉತ್ಪಾದಕರ ಸಂಸ್ಥೆಗಳ ರಚನೆಗೆ ಸಂಪನ್ಮೂಲ ಸಂಸ್ಥೆಗಳ ಎಂಪ್ಯಾನಲ್‌ ಕುರಿತು 08.01.2020 ಕನ್ನಡ ಆಯುಕ್ತರ ಕಾರ್ಯಾಲಯ ಜಅಇ 1.62 ಎಂಬಿ ವೀಕ್ಷಿಸಿ
7 2020-21ನೇ ಸಾಲಿನ ರೈತ ಉತ್ಪಾದಕರ ಸಂಸ್ಥೆಗಳ ಕಾರ್ಯಕ್ರಮದ ಕ್ರಿಯಾ ಯೋಜನೆ ಕುರಿತು 18.05.2020 ಕನ್ನಡ ಆಯುಕ್ತರ ಕಾರ್ಯಾಲಯ ಜಅಇ 1.63 ಎಂಬಿ ವೀಕ್ಷಿಸಿ
8 ರೈತ ಉತ್ಪಾದಕರ ಸಂಸ್ಥೆಗಳ ರಚನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆCOVID-19 30.04.2020 ಕನ್ನಡ ಆಯುಕ್ತರ ಕಾರ್ಯಾಲಯ ಜಅಇ 0.63 ಎಂಬಿ ವೀಕ್ಷಿಸಿ
9 ರಚಿತ ರೈತ ಉತ್ಪಾದಕರ ಸಂಸ್ಥೆಗಳ ಮೂಲ ಮಾಹಿತಿ ಸಮೀಕ್ಷೆ ಮಾಹಿತಿ 05.03.2020 ಕನ್ನಡ ಆಯುಕ್ತರ ಕಾರ್ಯಾಲಯ ಜಅಇ 2.97 ಎಂಬಿ ವೀಕ್ಷಿಸಿ
10 ರಚಿತ ರೈತ ಉತ್ಪಾದಕರ ಸಂಸ್ಥೆಗಳ ಪರಿಷ್ಕೃತ ಮೂಲ ಮಾಹಿತಿ ಸಮೀಕ್ಷೆ ಮಾಹಿತಿ 27.04.2020 ಕನ್ನಡ ಆಯುಕ್ತರ ಕಾರ್ಯಾಲಯ ಜಅಇ 4.8 ಎಂಬಿ ವೀಕ್ಷಿಸಿ

 

 

ಕ್ರ. ಸಂ. ಸರ್ಕಾರದ ಆದೇಶ ಸಂಖ್ಯೆ ದಿನಾಂಕ ವಿಷಯ ಭಾಷೆ ಮೂಲ ಗಾತ್ರ ವೀಕ್ಷಿಸಿ / ಡೌನ್‌ಲೋಡ್‌
1  ಕೃಇ 04 ಕೃಉಇ 2019 (ಭಾಗ-2) 14.01.2020 ರೈತ ಉತ್ಪಾದಕರ ಸಂಸ್ಥೆಗಳ ರಚನೆ ಗೆ ಆರ್ಥಿಕ ನೆರವು ಒದಗಿಸುವ ಬಗ್ಗೆ  ಕನ್ನಡ ಕರ್ನಾಟಕ ಸರ್ಕಾರ 2.86 ಎಂಬಿ ವೀಕ್ಷಿಸಿ
2  ಕೃಇ 04 ಕೃಉಇ 2019 (ಭಾಗ-1) 19.08.2019 ರೈತ ಉತ್ಪಾದಕರ ಸಂಸ್ಥೆಗಳ ರಚನೆ ಗೆ ಆರ್ಥಿಕ ನೆರವು ಒದಗಿಸುವ ಬಗ್ಗೆ  ಕನ್ನಡ ಕರ್ನಾಟಕ ಸರ್ಕಾರ 0.98 ಎಂಬಿ ವೀಕ್ಷಿಸಿ
3  ಕೃಇ 92 ಕೃಉಇ 2018, ಬೆಂಗಳೂರು 31.07.2019 ರೈತ ಉತ್ಪಾದಕರ ಸಂಸ್ಥೆಗಳ ನೀತಿ - 2018 (ತಿದ್ದುಪಡಿ ಆದೇಶ) ಕನ್ನಡ ಕರ್ನಾಟಕ ಸರ್ಕಾರ 0.3 ಎಂಬಿ ವೀಕ್ಷಿಸಿ
4  ಕೃಇ 04 ಕೃಉಇ 2019, ಬೆಂಗಳೂರು 15.05.2019 ರೈತ ಉತ್ಪಾದಕರ ಸಂಸ್ಥೆಗಳ ರಚನೆ ಗೆ ಆರ್ಥಿಕ ನೆರವು ಒದಗಿಸುವ ಬಗ್ಗೆ  ಕನ್ನಡ ಕರ್ನಾಟಕ ಸರ್ಕಾರ 0.37 ಎಂಬಿ ವೀಕ್ಷಿಸಿ
5  ಕೃಇ 92 ಕೃಉಇ 2018, ಬೆಂಗಳೂರು 17.01.2019 ರೈತ ಉತ್ಪಾದಕರ ಸಂಸ್ಥೆಗಳ  ನೀತಿ - 2018 ಕನ್ನಡ ಕರ್ನಾಟಕ ಸರ್ಕಾರ 8.65 ಎಂಬಿ ವೀಕ್ಷಿಸಿ
6  ಕೃಇ 92 ಕೃಉಇ 2018, ಬೆಂಗಳೂರು 26.02.2019 SLEC ಕುರಿತ ಸರ್ಕಾರಿ ಆದೇಶ ಕನ್ನಡ ಕರ್ನಾಟಕ ಸರ್ಕಾರ 2.84 ಎಂಬಿ ವೀಕ್ಷಿಸಿ
7 AGRI-AML/97/2020, ಬೆಂಗಳೂರು 25.08.2020 ರೈತ ಉತ್ಪಾದಕರ ಸಂಸ್ಥೆಗಳ (FPO) ಬೆಂಬಲಕ್ಕೆ ಅನುದಾನ ಒದಗಿಸುವ ಬಗ್ಗೆ ಹಾಗೂ ಮಾರ್ಗಸೂಚಿ ಕುರಿತು ಕನ್ನಡ ಕರ್ನಾಟಕ ಸರ್ಕಾರ 3.66 ಎಂಬಿ   ವೀಕ್ಷಿಸಿ

 

ಕ್ರ. ಸಂ. ಮುದ್ರಣ ವೀಕ್ಷಿಸಿ
1 ಜನವರಿ 2022  ವೀಕ್ಷಿಸಿ
2 ಏಪ್ರಿಲ್ 2022  ವೀಕ್ಷಿಸಿ

ಇತ್ತೀಚಿನ ನವೀಕರಣ​ : 17-11-2023 06:00 PM ಅನುಮೋದಕರು: Malathi


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080