ಅಭಿಪ್ರಾಯ / ಸಲಹೆಗಳು

ಕಿರು ಅರಣ್ಯ ಡ್ಯಾಶ್‌ಬೋರ್ಡ್

2023-24 ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0 (PMKSY-WDC 2.0) ಯೋಜನೆಯಡಿ ಅನುಷ್ಟಾನ ಮಾಡಿರುವ ಕಿರು ಅರಣ್ಯಗಳ ನೋಟ 

          ಅರಣ್ಯಗಳು ಪ್ರಕೃತಿದತ್ತವಾದ ಕೊಡುಗೆಯಾಗಿರುತ್ತದೆ. ಇವುಗಳಿಂದ ಹತ್ತು ಹಲವಾರು ಉಪಯೋಗಗಳಿವೆ. ಪ್ರಮುಖವಾಗಿ ಗಾಳಿ, ಮಳೆ, ನೀರು, ಮರಮುಟ್ಟು ನೀಡುವುದಲ್ಲದೇ ವಿವಿಧ ಜೀವ-ಜಂತುಗಳಿಗೆ ಆಶ್ರಯ ತಾಣವಾಗಿದೆ. ಅರಣ್ಯಗಳನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ನೀಡುವುದು ಈ ಸಮಯದ ಅವಶ್ಯವಾಗಿದೆ(Need of the Hour). ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ನಗರೀಕರಣ, ಕೈಗಾರಿಕೀಕರಣ, ಗಣಿಗಾರಿಕೆ ಇನ್ನು ಹತ್ತು-ಹಲವಾರು ಕಾರಣಗಳಿಂದ ಅರಣ್ಯಗಳ ಮೇಲೆ ಒತ್ತಡ ಬೀಳುತ್ತಿದೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಹವಮಾನ ವೈಪರ್ಯದ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಹಾಗೂ ವನ್ಯಜೀವಿ, ಮಾನವ ಸಂಘರ್ಷ ಸಹಾ ಏರ್ಪಟ್ಟಿರುವುದಲ್ಲದೆ ಪ್ರಾಣಿಗಳು, ಪಕ್ಷಿಗಳು, ಕೀಟಗಳು ಇತ್ಯಾದಿ ಜೀವ ಸಂಕುಲಗಳ ಮೂಲ ಸ್ಥಾನಕ್ಕೆ ಧಕ್ಕೆಯಾಗಿರುತ್ತದೆ. ಇವುಗಳನ್ನು ಸರಿಪಡಿಸಬೇಕಾಗಿರುತ್ತದೆ. ಈಗಾಗಲೇ ರಾಜ್ಯದಲ್ಲಿ ಶೇ. 20 ರಷ್ಟಿರುವ ಅರಣ್ಯವನ್ನು ಶೇ. 33 ಕ್ಕೆ ಹೆಚ್ಚಿಸುವುದು ಅವಶ್ಯವಿರುತ್ತದೆ. 

 

ಜಲಾನಯನ ಅಭಿವೃದ್ಧಿ ಇಲಾಖೆಯು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಗಳನ್ನು ಜಲಾನಯನ ತತ್ವದ ದಿಬ್ಬದಿಂದ ಕಣಿವೆ ಆಧಾರದ ಮೇರೆಗೆ ಸಂಪೂರ್ಣ ಉಪಚಾರ ಕೈಗೊಳ್ಳಲಾಗುತ್ತಿದೆ. ಕಾರ್ಯಕ್ರಮದ ಉದ್ದೇಶಗಳು ಪ್ರಮುಖವಾಗಿ ಮಳೆ ನೀರು ಕೊಚ್ಚಣೆಯಿಂದ ಹಳ್ಳದ ಮೂಲಕ ಹರಿಯುವ ನೀರನ್ನು ಸಂಗ್ರಹಿಸಿ ಅಂತರ್ಜಲ ವೃದ್ಧಿಸುವುದು ಪ್ರಮುಖ ಉದ್ದೇಶವಾಗಿರುತ್ತದೆ. ಜಾನುವಾರುಗಳಿಗೆ ಕುಡಿಯುವ ನೀರೊದಗಿಸುವುದು. ಬಿದ್ದ ಮಳೆ ನೀರನ್ನು ಇಂಗಿಸಿ ಮಣ್ಣಿನಲ್ಲಿ ತೇವಾಂಶ ಸಂರಕ್ಷಿಸಲು ಹಾಗೂ ಕೊಚ್ಚಿ ಹೋಗುವ ಮಳೆ ನೀರು ಸಂಗ್ರಹಿಸಿ ರಕ್ಷಣಾತ್ಮಕ ನೀರಾವರಿಯಾಗಿ ಉಪಯೋಗಿಸಲು ಅನುವಾಗುವಂತೆ ಜಲಾನಯನ ಚಟುವಟಿಕೆ/ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. 

 

ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ಅರಣ್ಯಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಆಹಾರದ ಕೊರತೆಯಾಗಿ ಇವುಗಳು ಅಳಿವಿನ ಅಂಚಿನಲ್ಲಿರುತ್ತವೆ. ಇವುಗಳನ್ನು ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಜೊತೆಗೆ ಪೂರಕ ಪರಿಸರವನ್ನು ಅಭಿವೃದ್ಧಿಪಡಿಸಬೇಕಾಗಿರುತ್ತದೆ. ಈ ದೆಸೆಯಲ್ಲಿ ಕಿರು ಅರಣ್ಯ ಕಾರ್ಯಕ್ರಮವನ್ನು ಇಲಾಖಾ ಯೋಜನೆಗಳಲ್ಲಿ ಪ್ರಸಕ್ತ ಸಾಲಿನಲ್ಲೇ ಹಮ್ಮಿಕೊಳ್ಳಲಾಗಿದೆ. ಕಿರು ಅರಣ್ಯದಲ್ಲಿ ವಿವಿಧ ಕಾಡು ಮರಗಳಾದ ಗೋಣಿ ಮರ, ಅತ್ತಿ ಮರ, ಬಸರಿ ಮರ, ಹಿಪ್ಪೆ ಮರ, ಅರಳಿ ಮರ, ಆಲದ ಮರ, ನಾಯಿ ನೇರಳೆ, ಸಿಹಿ ಹುಣಸೆ, ಬೇಲದ ಮರ, ಬೇವಿನ ಮರ, ಸೀತಾಫಲ, ಕಾಡು ಮಾವು ಹೀಗೆ ಇತರೆ ಹಣ್ಣು ನೀಡುವ ಕಾಡು ಮರಗಳನ್ನು ಬೆಳೆಸಲಾಗುವುದು. ಪ್ರತೀ ಕಿರು ಅರಣ್ಯದಲ್ಲಿ ಕನಿಷ್ಠ 100 ರಿಂದ 150 ಗಿಡಗಳನ್ನು ಸಾಲುಗಳಲ್ಲಿ ನೆಟ್ಟು ಬೆಳೆಸಲಾಗುವುದು. ಪ್ರತಿ ಜಲಾನಯನಕ್ಕೆ ಕನಿಷ್ಠ 5 ರಿಂದ 10 ಕಿರು ಅರಣ್ಯಗಳನ್ನು ವಿವಿಧ ಯೋಜನೆಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ಗಿಡಗಳ ಸಂರಕ್ಷಣೆಗೆ ಪೂರಕವಾದ ಬೇಲಿ ಹಾಕುವುದು, ಆಧಾರ ಕೋಲು ಕಟ್ಟುವುದು, ಪಾತಿಗಳನ್ನು ಮಾಡುವುದು, ಗಿಡಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು, ಗಿಡಗಳನ್ನು ಸಂರಕ್ಷಿಸಲು ವಾಚ್ ಅಂಡ್ ವಾರ್ಡ್ ಮಾಡುವುದು. 

2023-24 ನೇ ಸಾಲಿನ PMKSY WDC 2.0 ಯೋಜನೆಯಡಿ ಜಿಲ್ಲಾವಾರು ಅನುಷ್ಟಾನಗೊಳಿಸುತ್ತಿರುವ ಕಿರು ಅರಣ್ಯಗಳ ವಿವರಗಳು
(As on 27.09.2023 )
ಕ್ರ.ಸಂ. ಜಿಲ್ಲೆಯ ಹೆಸರು PMKSY WDC 2.0 MGNAREGA Total Total
Completed Under progress Completed Under progress Completed Under progress
1 ಬಾಗಲಕೋಟೆ 6 0 1 0 7 0 7
2 ಬೆಂಗಳೂರು 5 0 2 0 7 0 7
3 ಬೆಳಗಾವಿ 15 0 0 0 15 0 15
4 ಬಳ್ಳಾರಿ 5 0 0 0 5 0 5
5 ಬೀದರ್ 5 0 5 0 10 0 10
6 ಚಾಮರಾಜನಗರ 4 0 0 0 4 0 4
7 ಚಿಕ್ಕಮಗಳೂರು 7 0 0 0 7 0 7
8 ಚಿಕ್ಕಬಳ್ಳಾಪುರ 0 0 3 0 3 0 3
9 ಚಿತ್ರದುರ್ಗ 5 0 0 0 5 0 5
10 ದಾವಣಗೆರೆ 6 0 0 0 6 0 6
11 ಧಾರವಾಡ 5 0 0 0 5 0 5
12 ಗದಗ 7 0 0 0 7 0 7
13 ಕಲಬುರಗಿ 2 0 4 0 6 0 6
14 ಹಾಸನ 10 0 0 0 10 0 10
15 ಹಾವೇರಿ 21 0 0 0 21 0 21
16 ಕೋಲಾರ 5 0 4 0 9 0 9
17 ಕೊಪ್ಪಳ 5 0 0 0 5 0 5
18 ಮಂಡ್ಯ 10 0 0 0 10 0 10
19 ಮೈಸೂರು 8 0 1 0 9 0 9
20 ಕೊಡಗು 4 0 0 0 4 0 4
21 ರಾಯಚೂರು 2 0 5 0 7 0 7
22 ಉತ್ತರ ಕನ್ನಡ 6 0 0 0 6 0 6
23 ಶಿವಮೊಗ್ಗ 6 0 1 0 7 0 7
24 ತುಮಕೂರು 7 0 0 0 7 0 7
25 ಉಡುಪಿ 12 0 0 0 12 0 12
26 ದಕ್ಷಿಣ ಕನ್ನಡ 10 0 0 0 10 0 10
27 ರಾಮನಗರ 4 0 0 0 4 0 4
28 ವಿಜಯಪುರ 7 0 0 0 7 0 7
29 ವಿಜಯನಗರ 5 0 0 0 5 0 5
30 ಯಾದಗಿರಿ 7 0 0 0 7 0 7
ಒಟ್ಟಾರೆ 201 0 26 0 227 0 227

 

 


kanpie  bar_kan 

ಇತ್ತೀಚಿನ ನವೀಕರಣ​ : 09-11-2023 11:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080