ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಜಲಾನಯನ

 

ಒಂದು  ನಿರ್ಧಿಷ್ಟ ಪ್ರದೇಶದಲ್ಲಿ ದೊರೆಯುವ ನೀರನ್ನು ಒಂದೇ ಕಡೆಯಲ್ಲಿ ಒಗ್ಗೂಡಿಸಿ ಆ ನೀರನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಿಕೊಳ್ಳಲಾಗುತ್ತಿರುವ ಪ್ರದೇಶ ಅಥವಾ  ನೀರನ್ನು ಹೊಂದಿರುವ ಸ್ಥಳಾಕೃತಿಯ ಪ್ರದೇಶವನ್ನು  ಜಲಾನಯನ ಎಂದು ಕರೆಯಲಾಗುತ್ತದೆ. ಇದರ ಅರ್ಥ, ಒಂದು ಪ್ರದೇಶದ ಮೇಲೆ ಬೀಳುವ ಮಳೆ ನೀರನ್ನು ಕೊಯ್ಲು ಮಾಡಿ ಆ ನೀರನ್ನು ಆ ಪ್ರದೇಶದಿಂದ ಒಂದೇ ಬಿಂದುವಿನ ಮೂಲಕ ಹರಿಸಲಾಗುತ್ತದೆ. ಇದನ್ನು ಜಲಾನಯನ ಪ್ರದೇಶ ಅಥವಾ ನದಿ ಪಾತ್ರದ ಜಲಾನಯನ ಪ್ರದೇಶ ಎಂದು ಕರೆಯುತ್ತಾರೆ. ಜಲಾನಯನ ಪ್ರದೇಶವು ಕೊಳ, ಸರೋವರ, ತೊರೆಗಳು, ನಿರ್ಮಿತ ಕಾಲುವೆಗಳು, ಚಂಡಮಾರುತದಿಂದ ಉಂಟಾಗುವ ನೀರಿನ ಸೆಲೆಗಳು, ನೀರಾವರಿ ಪ್ರದೇಶಗಳು ಮತ್ತು ಭೂಮಿಯೊಳಗಿನ ಅಂತರ್ಜಲ ಅಥವಾ ನದಿಗಳ ನೀರಿನ ಮೂಲದಿಂದ ರಚನೆಗೊಂಡಿರುತ್ತದೆ. ಕೆಳಗಿನ ರೇಖಾಚಿತ್ರವು ಜಲಾನಯನ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಸಣ್ಣ  ಹೊಳೆಗಳೊಂದಿಗೆ ಪ್ರಾರಂಭವಾಗುವ ಒಂದು ವಿಶಿಷ್ಟವಾದ ಜಲಾನಯನ ಪ್ರದೇಶವನ್ನು ಸೂಚಿಸುತ್ತದೆ. ಹೆಚ್ಚು ಉಪನದಿ, ಹೊಳೆಗಳು ನದಿಯನ್ನು ಸೇರಿಕೊಂಡಂತೆ, ನೀರಿನ ಪ್ರಮಾಣವು ಹೆಚ್ಚಾಗುತ್ತದೆ. ಈ ನದಿ ಅಂತಿಮವಾಗಿ ಸಂಗಮ ಸ್ಥಳದಲ್ಲಿ ಇನ್ನೂ ದೊಡ್ಡದಾಗಿ ನದಿಗೆ ಸೇರುತ್ತದೆ.

 

ಜಲಾನಯನ ಅಭಿವೃದ್ಧಿ

 

ಮಣ್ಣಿನ ಪ್ರಕಾರ, ಮಣ್ಣಿನ ಆಳ, ಸಸ್ಯಗಳ ಹೊದಿಕೆ, ಆ ಪ್ರದೇಶದಲ್ಲಿ ಕೊಯ್ಲು ಮಾಡಬಹುದಾದ ಮಳೆ ನೀರು ಮತ್ತು ಆ ಪ್ರದೇಶಕ್ಕೆ ಬೇಕಾಗುವ ನೀರು ಮತ್ತು ಮಣ್ಣಿನ ಸಂಸ್ಕರಣೆಯ ಆಧಾರದ ಮೇಲೆ ಕೈಗೊಳ್ಳಬಹುದಾದ ಅಭಿವೃದ್ದಿ ಕಾರ್ಯಗಳಿಗೆ ಜಲಾನಯನ ಅಭಿವೃದ್ಧಿ ಎಂದು ಕರೆಯುತ್ತಾರೆ. ಇದು ಒಂದು ಸರಳ ಪದವಲ್ಲ. ಜಲಾನಯನ ಅಭಿವೃದ್ಧಿ ಎಂಬ ಪದವು ಸಮಾನತೆ, ಸುಸ್ಥಿರತೆ, ಲಿಂಗ ಮತ್ತು ಜನರ ಭಾಗವಹಿಸುವಿಕೆಯಂತಹ ಹೆಚ್ಚುವರಿ ಆಯಾಮಗಳನ್ನು ಒಳಗೊಂಡಿದೆ. ಇದು ಹಳ್ಳಿಯ ಒಟ್ಟಾರೆ ಅಭಿವೃದ್ಧಿಗೆ ಮತ್ತು ಜಲಾನಯನ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಿಶ್ವಾಸಾರ್ಹ ಸಾಧನವಾಗಿ ಮಾರ್ಪಟ್ಟಿದೆ. ಜಲಾನಯನ ಅಭಿವೃದ್ಧಿಯು ಜಲಾನಯನ ಪ್ರದೇಶದೊಳಗಿನ ಎಲ್ಲಾ ನೈಸರ್ಗಿಕ  (ಭೂಮಿ, ನೀರಿನ ಸಸ್ಯಗಳು, ಪ್ರಾಣಿಗಳು) ಸಂಪನ್ಮೂಲಗಳ ಸಂರಕ್ಷಣೆ, ಪುನರುತ್ಪಾದನೆಯನ್ನು ಸೂಚಿಸುತ್ತದೆ. ಜಲಾನಯನ ನಿರ್ವಹಣೆ ಒಂದು ಕಡೆ ನೈಸರ್ಗಿಕ ಸಂಪನ್ಮೂಲಗಳು ಮತ್ತು ಇನ್ನೊಂದೆಡೆ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಪರಿಸರದಲ್ಲಿ ಸಾಧ್ಯವಾದಷ್ಟು ಉತ್ತಮವಾದ ಸಮತೋಲನವನ್ನು ತರಲು ಪ್ರಯತ್ನಿಸುತ್ತದೆ. ಪರಿಸರದ ಅರ್ಧಪತನಕ್ಕೆ ಮಾನವನೇ  ಮುಖ್ಯ ಕಾರಣ. ಜಲಾನಯನ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಜಾಗೃತಿ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ ಮಾತ್ರ ನೈಸರ್ಗಿಕ ಪರಿಸರದ ಪುನರುತ್ಪಾದನೆ ಮತ್ತು ಸಂರಕ್ಷಣೆ ಸಾಧ್ಯವಾಗುತ್ತದೆ.

 

 ಮನುಷ್ಯ ಮತ್ತು ಅವನ ಪರಿಸರ ಪರಸ್ಪರ ಅವಲಂಬಿತವಾಗಿವೆ. ಪರಿಸರದಲ್ಲಿನ ಬದಲಾವಣೆಗಳು ಅದನ್ನು ಅವಲಂಬಿಸಿರುವ ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಅವನತಿ ಹೊಂದಿದ ಪರಿಸರದಲ್ಲಿ ಜನರ ಜೀವನವು ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ.  ಜಲಾನಯನದ ಸಮಗ್ರ ಅಭಿವೃದ್ಧಿಯ ಮೂಲಕ ಪರಿಸರ ನಾಶವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು. ಯಾವುದೇ ಅಭಿವೃದ್ಧಿ ಉಪಕ್ರಮವನ್ನು ಯೋಜಿಸಲು ಜಲಾನಯನ  ಇಲಾಖೆಯು ನೈಸರ್ಗಿಕವಾದ ಭೂ-ಜಲವಿಜ್ಞಾನ ಘಟಕವನ್ನು ಒದಗಿಸುತ್ತದೆ.

 

ಜಲಾನಯನ ಇಲಾಖೆ ಕಾರ್ಯಕ್ರಮಗಳು :

 

  1. ಬೆಳೆಗಳು ಮತ್ತು ಜಾನುವಾರುಗಳ ಮೇಲೆ ಬರಗಾಲದ ದುಷ್ಪರಿಣಾಮವನ್ನು ತಗ್ಗಿಸುವುದು.
  2. ಮರಳುಗಾರಿಕೆಯನ್ನು ನಿಯಂತ್ರಿಸುವುದು.
  3. ಪರಿಸರ ಸಮತೋಲನವನ್ನು ಪುನಃ ಸ್ಥಾಪಿಸಲು ಪ್ರೋತ್ಸಾಹಿಸುವುದು / ಗ್ರಾಮ ಸಮುದಾಯದ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು.

 

ಪ್ರಖ್ಯಾತ ಅರ್ಥಶಾಸ್ತ್ರಜ್ಞ ಸಿ.ಎಚ್.ಹನುಮಂತ ರಾವ್  ರವರು, "ಮಣ್ಣಿನ ಸವೆತ ಮತ್ತು ತೇವಾಂಶದ ಒತ್ತಡವನ್ನು ಅನುಭವಿಸುವ ದುರ್ಬಲವಾದ ಪರಿಸರದ ವ್ಯವಸ್ಥೆಗಳಲ್ಲಿ ವಾಸಿಸುವ ಜನರ ಜೀವನೋಪಾಯಗಳನ್ನು ರಕ್ಷಿಸುವ ತಂತ್ರವಾಗಿ ಜಲಾನಯನ ಅಭಿವೃದ್ಧಿಯನ್ನು ಮೂಲತಃ ಕಲ್ಪಿಸಲಾಗಿದೆ" ಎಂದು ಹೇಳಿರುತ್ತಾರೆ. ಸರ್ಕಾರವು ಫೆಸಿಲಿಟೇಟರ್ ಆಗಿ ಕಾರ್ಯನಿರ್ವಹಿಸಲು ಮತ್ತು ತಳಮಟ್ಟದ ಜನರು ಸಹ  ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವ ವ್ಯವಸ್ಥೆಯನ್ನು ರೂಪಿಸುವ ಗುರಿಯನ್ನು ಜಲಾನಯನ ಅಭಿವೃದ್ಧಿ ಕಾರ್ಯಕ್ರಮವು ಹೊಂದಿರುತ್ತದೆ.

 

ಜಲಾನಯನ ವಿಧಾನದ ಪ್ರಯೋಜನಗಳು

 

  1. ಒಣ ಭೂ ಕೃಷಿಯಲ್ಲಿ ಬೆಳೆ ಇಳುವರಿ ಹೆಚ್ಚಿಸುವುದು.
  2. ಸವೆತದಿಂದ ಉಂಟಾಗುವ ಮಣ್ಣಿನ ನಷ್ಟವನ್ನು ಕಡಿಮೆ ಮಾಡುವುದು.
  3. ಬಂಜರು ಬೆಟ್ಟದ ಇಳಿಜಾರುಗಳ ವಿಸ್ತಾರವನ್ನು ಸಸ್ಯವರ್ಗದಿಂದ ಆವೃತಗೊಳಿಸುವುದು.
  4. ಒಣ ಭೂ ತೋಟಗಾರಿಕೆಯ ಅಡಿಯಲ್ಲಿ ತರಲಾದ ಭೂಮಿಯ ವಿಸ್ತರಣೆ.
  5. ಕೃಷಿ-ತೋಟಗಾರಿಕೆ ಮತ್ತು ಕೃಷಿ-ಅರಣ್ಯ ವ್ಯವಸ್ಥೆಗಳ ಅಭಿವೃದ್ಧಿ.
  6. ನಾಲಾ ಬಂಡ್‌ಗಳು, ಕೃಷಿ ಕೊಳಗಳು, ಗಲ್ಲಿ ಒಡ್ಡುಗಳ ಮೂಲಕ ನೀರಿನ ಸಂಪನ್ಮೂಲವನ್ನು ಕಟಾವು ಮಾಡುವುದು.
  7. ಹೆಚ್ಚು ಮೇವು ಮತ್ತು ಹುಲ್ಲಿಗಾಗಿ ಹುಲ್ಲಿನ ಜಮೀನುಗಳ ಪುನರುತ್ಪಾದನೆ.
  8. ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸುವುದು.

 

ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ಉದ್ದೇಶಗಳು

 

  • ಆಯ್ದ ಜಲಾನಯನ ಪ್ರದೇಶಗಳ ಉತ್ಪಾದಕ ಸಂಭಾವನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ನೈಸರ್ಗಿಕ ಸಂಪನ್ಮೂಲವನ್ನು ಸುಧಾರಿಸುವುದು.
  • ಬಡತನದ ನಿವಾರಣೆ.
  • ಸುಸ್ಥಿರ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗಾಗಿ ಸಮುದಾಯ ಆಧಾರಿತ ಸಾಂಸ್ಥಿಕ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಬಲ ಪಡಿಸುವುದು.
  • ಕೃಷಿಯೇತರ ಕ್ಷೇತ್ರಗಳಿಗೆ ಸುಧಾರಿತ ಕೌಶಲ್ಯ ಮತ್ತು ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು.
  • ಯೋಜನೆ, ಅನುಷ್ಠಾನ, ಸಾಮಾಜಿಕ ಮತ್ತು ಪರಿಸರ ನಿರ್ವಹಣೆ, ಸ್ವತ್ತುಗಳ ನಿರ್ವಹಣೆಯಲ್ಲಿ ಗ್ರಾಮ ಸಮುದಾಯಗಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು.

ಇತ್ತೀಚಿನ ನವೀಕರಣ​ : 03-01-2024 12:39 PM ಅನುಮೋದಕರು: superadmin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080