ಅಭಿಪ್ರಾಯ / ಸಲಹೆಗಳು

ಅರಣ್ಯ

ಅರಣ್ಯ

ಜಲಾನಯನ ಅಭಿವೃದ್ದಿ ಇಲಾಖೆಯಲ್ಲಿ ಜೈವಿಕ ವೈವಿಧ್ಯತೆ ಅಭಿವೃದ್ದಿಪಡಿಸುವ ಹಾಗೂ ಮೂಲ ಉದ್ದೇಶವಾದ ಮಣ್ಣು ಮತ್ತು ನೀರು ಸಂರಕ್ಷಣೆಯ ಜೊತೆಯಲ್ಲಿ ರೈತರ ಆದಾಯ ಹೆಚ್ಚಿಸಲು, ರೈತರ ದಿನ ನಿತ್ಯದ ಉಪಯೋಗಕ್ಕೆ ಸೌದೆ, ಮೇವು, ಹಸಿರು ಎಲೆ ಮುಂತಾದವುಗಳನ್ನು ಪೂರೈಸಲು ಅರಣ್ಯ ಘಟಕದ ವತಿಯಿಂದ ಖಾಸಗಿ ಜಮೀನಿನಲ್ಲಿ ಕೃಷಿ ಅರಣ್ಯ, ಸಮುದಾಯ ಭೂಮಿಯಡಿ ರಸ್ತೆ ಬದಿ, ನಾಲಾ ಬದು, ಶಾಲಾ ಆವರಣ, ದೇವಸ್ಥಾನದ ಆವರಣ, ಕೆರೆ ಅಂಗಳ ನೆಡುತೋಪು, ಟ್ರೆಂಚ್/ಗುಂಡಿಗಳ ನೆಡುತೋಪು ಮಾದರಿಗಳಲ್ಲಿ ಅರಣ್ಯೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅನುಷ್ಠಾನ ಮಾಡುತ್ತಿರುವ ಮಾದರಿಗಳ ವಿವರಗಳು ಕೆಳಕಂಡಂತಿವೆ:


ಕೃಷಿ ಅರಣ್ಯ:


ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ರೈತರ ಜಮೀನಿನಲ್ಲಿ ಕೃಷಿ ಅರಣ್ಯ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ. ಈ ಮಾದರಿಯಲ್ಲಿ ಪ್ರತಿ ಹೆಕ್ಟೇರಿಗೆ 100 ಗಿಡಗಳಂತೆ ಸ್ಥಳೀಯವಾಗಿ ಬೆಳೆಯುವ ಹಾಗೂ ರೈತರಿಗೆ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಲಾಭ ತರುವಂತಹ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ. ಉದಾ: ತೇಗ, ಸಿಲ್ವರ್ ಓಕ್, ಹೆಬ್ಬೇವು, ಹಲಸು, ಹೊಂಗೆ, ಬೇವು, ನೇರಳೆ, ಸೀತಾಫಲ, ನುಗ್ಗೆ, ಕರಿಬೇವು, ನೆಲ್ಲಿ, ನಿಂಬೆ, ಪೇರಲೆ, ಹಿಪ್ಪೆ, ಸೀಮಾರುಬಾ, ಸುಬಾಬುಲ್, ಅಗಸೆ, ಇತ್ಯಾದಿ.

             

 

ಸಮುದಾಯ ಪ್ರದೇಶ:

ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಅರಣ್ಯ ಭೂಮಿ/ಸಮುದಾಯ ಪ್ರದೇಶಗಳಲ್ಲಿ ಪ್ರತಿ ಹೆಕ್ಟೇರಿಗೆ 400 ಗಿಡಗಳಂತೆ ನಾಟಿ ಮಾಡಲಾಗುತ್ತಿದೆ. ನಾಟಿ ಮಾಡಿದ ತರುವಾಯ ಮುಂದಿನ ನಿರ್ವಹಣೆ ಹಾಗೂ ಆದಾಯ/ಫಲವನ್ನು ಪಡೆಯಲು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಲಾಗುತ್ತದೆ. ಈ ಮಾದರಿಯಲ್ಲಿ ಬೆಳೆಸುವ ಸಸಿಗಳು: ಹೊಂಗೆ, ಸೀತಾಫಲ, ಗೇರು, ಬೆಟ್ಟದ ನೆಲ್ಲಿ, ಹೊನ್ನೆ, ಬಿದಿರು, ಹೊಳೆಮತ್ತಿ, ಸಿಸ್ಸು, ಆಲ, ಸೀಗೆ, ಶ್ರೀಗಂಧ, ಇತ್ಯಾದಿ.

 


ನೀರು ಸಂಗ್ರಹಣಾ ವಿನ್ಯಾಸಗಳು:


ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ನೀರು ಸಂಗ್ರಹಣಾ ವಿನ್ಯಾಸಗಳ ಸುತ್ತಲೂ ಹಾಗೂ ನಾಲಾ ಬದುಗಳಲ್ಲಿ ಹೆಕ್ಟೇರಿಗೆ 200 ಗಿಡಗಳಂತೆ ನಾಟಿ ಮಾಡಲಾಗುತ್ತಿದೆ. ಸ್ಥಳೀಯ ರೈತರೇ ಇವುಗಳ ಆದಾಯ/ಫಲವನ್ನು ಪಡೆಯಲಿದ್ದು ಈ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ. ಉದಾ: ಹೊಂಗೆ, ಬಿದಿರು, ಹೊಳೆಮತ್ತಿ, ಸೀಗೆ, ಮುತ್ತುಗ, ಕತ್ತಾಳೆ, ಸೀಮೆ ತಂಗಡಿ, ಗ್ಲಿರಿಸೀಡಿಯ, ಇತ್ಯಾದಿ.



ಸಾಗುವಳಿಯಲ್ಲದ ಪ್ರದೇಶದಲ್ಲಿ ಕತ್ತಾಳೆ ಸಸಿಗಳ ನಾಟಿ:


ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಸಾಗುವಳಿಗೆ ಯೋಗ್ಯವಲ್ಲದ ಪ್ರದೇಶದಲ್ಲಿ ಮಣ್ಣಿನ ಕೊಚ್ಚಣೆ ತಡೆಯಲು ಕತ್ತಾಳೆ ಸಸಿಗಳನ್ನು ಪ್ರತಿ ಹೆಕ್ಟೇರಿಗೆ 1600 suckers ಗಳಂತೆ ನಾಟಿ ಮಾಡಲಾಗುತ್ತಿದೆ. ಕತ್ತಾಳೆ ಸಸಿಗಳನ್ನು ನಾಲಾ ಬದು, ಕೃಷಿ ಹೊಂಡ, ಗಲ್ಲಿ ಚೆಕ್ಸ್, ಕ್ಷೇತ್ರ ಬದುಗಳು, ಕಂದಕ ಕಂ ಬದುಗಳ ಮೇಲೆ ನಾಟಿ ಮಾಡಿ ಬೆಳೆಸಲಾಗುತ್ತಿದೆ.

 

ಬೀಜ ಬಿತ್ತನೆ:


ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಸಾಗುವಳಿ ಪ್ರದೇಶದಲ್ಲಿನ ಕ್ಷೇತ್ರ ಬದುಗಳು, ಕೃಷಿ ಹೊಂಡಗಳ ಬದು, ಇತರೆ ಭೂಸಾರ/ನೀರು ಸಂರಕ್ಷಣಾ ಚಟುವಟಿಕೆಗಳ ಬದುಗಳ ಮೇಲೆ ಹೆಕ್ಟೇರಿಗೆ 10 ಕೆಜಿ ಬೀಜಗಳಂತೆ ಬಿತ್ತನೆ ಮಾಡಲಾಗುತ್ತಿದೆ. ಬಿತ್ತನೆ ಮಾಡುವ ಬೀಜಗಳು: ಗ್ಲೈರಿಸೀಡಿಯಾ, ಕ್ಯಾಸಿಯ ಸಿಯಮಿಯ, ಪೊಂಗೆಮಿಯ, ಬೇವು, ಮುತ್ತುಗ ಹಾಗೂ ಇತರೆ ಸ್ಥಳೀಯ ಜಾತಿಯ ಬೀಜಗಳು.

 

 

ಸಂಸ್ಥೆಗಳ ಆವರಣದಲ್ಲಿ ಸಸಿಗಳ ನಾಟಿ:


ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಶಾಲೆ, ದೇವಸ್ಥಾನ, ಸಂಸ್ಥೆಗಳ ಆವರಣದಲ್ಲಿ ಪ್ರತಿ ಹೆಕ್ಟೇರಿಗೆ 100 ಗಿಡಗಳಂತೆ ನಾಟಿ ಮಾಡಿ ಆಯಾ ಸಂಸ್ಥೆಗಳಿಗೆ ನಿರ್ವಹಣೆ ಹಾಗೂ ಫಲವನ್ನು ಪಡೆಯಲು ಅನುವಾಗುವಂತೆ ಹಸ್ತಾಂತರಿಸಲಾಗುವುದು. ಉದಾ: ತೇಗ, ಸಿಲ್ವರ್ ಓಕ್, ಹೊಂಗೆ, ಹೆಬ್ಬೇವು, ಬೇವು, ನೇರಳೆ, ಸೀತಾಫಲ, ಮಾವು, ಹುಣಿಸೆ, ಇತ್ಯಾದಿ.

 

ರಸ್ತೆ ಬದಿ ಸಸಿಗಳ ನಾಟಿ:


ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ರಸ್ತೆಗಳ ಅಕ್ಕ ಪಕ್ಕದಲ್ಲಿ ಪ್ರತಿ ಕಿ.ಮೀ.ಗೆ 200 ರಂತೆ ಸಸಿಗಳನ್ನು ನಾಟಿ ಮಾಡಲಾಗುತ್ತದೆ. ನಾಟಿ ಮಾಡಿದ ತರುವಾಯ ಮುಂದಿನ ನಿರ್ವಹಣೆ ಹಾಗೂ ಆದಾಯ/ಫಲವನ್ನು ಪಡೆಯಲು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಲಾಗುತ್ತದೆ. ಈ ಮಾದರಿಯಲ್ಲಿ ಬೆಳೆಸುವ ಸಸಿಗಳು: ಹುಣಿಸೆ, ನೇರಳೆ, ಮಾವು, ನೆಲ್ಲಿ, ಹಲಸು, ಅರಳಿ, ಆಲ, ಗೋಡಂಬಿ, ಇತ್ಯಾದಿ.

 

ಇತ್ತೀಚಿನ ನವೀಕರಣ​ : 11-11-2019 12:47 PM ಅನುಮೋದಕರು: Krishnamurthy


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080